ತಿರುವನಂತಪುರ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯ ಡಾ. ವಂದನಾದಾಸ್ ಹತ್ಯೆಯಲ್ಲಿ ಪೋಲೀಸರಿಂದ ಗಂಭೀರ ನಿರ್ಲಕ್ಷ್ಯ ಕಂಡುಬಂದಿದೆ ಎಂದು ಪತ್ತೆಯಾಗಿದೆ.
ಇಬ್ಬರು ಪೋಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಎಎಸ್ ಐಗಳಾದ ಬೇಬಿ ಮೋಹನ್ ಮತ್ತು ಮಣಿಲಾಲ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ತಿರುವನಂತಪುರ ರೇಂಜ್ ಡಿಐಜಿ ಆರ್.ನಿಶಾಂತಿನಿ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ. ದಾಳಿಯ ವೇಳೆ ಪೋಲೀಸರು ತಮ್ಮ ಸುರಕ್ಷತೆಗಾಗಿ ಪಲಾಯನಗೈದಿರುವುದನ್ನು ಡಿಐಜಿ ಕಂಡುಕೊಂಡಿದ್ದಾರೆ. ಹಿಂಸಾತ್ಮಕ ಆರೋಪಿಗಳನ್ನು ಬಗ್ಗುಬಡಿಯಲು ಅಥವಾ ಸದೆಬಡಿಯಲು ಯಾವುದೇ ಕ್ರಮ ಕೈಗೊಳ್ಳದಿರುವುದು ಕೂಡ ಕಂಡು ಬಂದಿದೆ. ಆತ್ಮರಕ್ಷಣೆಗಾಗಿ ಜನರ ಪ್ರಾಣ ರಕ್ಷಣೆಗೆ ಮುಂದಾಗದ ಪೋಲೀಸರು ಕಾನೂನು ಉಲ್ಲಂಘಿಸಿ ಓಡಿ ಹೋಗುತ್ತಿದ್ದಾರೆ ಎಂದು ಡಿಐಜಿ ಟೀಕಿಸಿದರು.
ಆರೋಪಿ ಜಿ.ಸಂದೀಪ್ ಡಾ.ವಂದನದಾಸ್ ಅವರನ್ನು ಕೊಲ್ಲಂ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೇ 10ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ವೈದ್ಯಕೀಯ ಪರೀಕ್ಷೆಗಾಗಿ ಪೋಲೀಸ್ ಆಸ್ಪತ್ರೆಗೆ ಕರೆತಂದ ಸಂದೀಪ್ ಚಿಕಿತ್ಸೆ ವೇಳೆ ಹಿಂಸಾಚಾರ ನಡೆಸಿದ್ದು, ಡಾ. ವಂದನಾ ದಾಸ್ ಅವರನ್ನು ಇರಿದು ಸಾಯಿಸಲಾಗಿತ್ತು.