ಕಾಸರಗೋಡು: ಉದುಮ ಲಲಿತ್ ರೆಸಾರ್ಟ್‍ನಲ್ಲಿ ಎರಡು ದಿವಸಗಳ ಕಾಲ ನಡೆದ ರೈಸಿಂಗ್ ಕಾಸರಗೋಡು ಜಿಲ್ಲಾ ಹೂಡಿಕೆದಾರರ ಸಮಾವೇಶದ ಸಮಾರೋಪ ಕಾರ್ಯಕ್ರಮವನ್ನು ಸ್ಥಳೀಯಾಡಳಿತ ಸಂಸ್ಥೆ ಮುಖ್ಯ ಹೆಚ್ಚುವರಿ ಕಾರ್ಯದರ್ಶಿ ಶಾರದ ಮುರಳೀಧರನ್ ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಹೆಚ್ಚಿನ ಜಂಟಿ ಯೋಜನೆಗಳನ್ನು ಕೈಗೊಂಡು ಮುಂದೆ ಬರಬೇಕು. ಖಾಸಗಿ ಹೂಡಿಕೆಯೊಂದಿಗೆ ಸರ್ಕಾರದ ಯೋಜನೆಗಳನ್ನು ಹೆಚ್ಚು ಕ್ರಿಯಾತ್ಮಕಗೊಳಿಸಲು ಸಾಧ್ಯ. ಇದಕ್ಕೆ ವಿವಿಧ ಕ್ಷೇತ್ರಗಳ ಸಹಕಾರದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭಕೇಂದ್ರ ಸರ್ಕಾರದ ಅತ್ಯುತ್ತಮ ತನಿಖಾಧಿಕಾರಿ ಪ್ರಶಸ್ತಿ ವಿಜೇತ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಅವರನ್ನು ಸನ್ಮಾನಿಸಲಾಯಿತು. ಸಮಂ ಪ್ರಶಸ್ತಿ ವಿಜೇತರಾದ ಕೊಟ್ಟಾಯಂನ ನಿವೃತ್ತ ಜಿಲ್ಲಾಧಿಕಾರಿ ಪಿ.ಕೆ.ಜಯಶ್ರೀ ಅವರಿಗೆ ಎಲ್‍ಎಸ್‍ಜಿಡಿಇಯ ಮುಖ್ಯ ಹೆಚ್ಚುವರಿ ಕಾರ್ಯದರ್ಶಿ ಶಾರದ ಮುರಳೀಧರನ್ ಅವರು ಸಮಂ ಪ್ರಶಸ್ತಿ ನೀಡಿ ಗೌರವಿಸಿದರು. ನಾಗರಿಕ ಸರಬರಾಜು ಆಯುಕ್ತರು ಹಾಗೂ ರಾಷ್ಟ್ರೀಯ ಆಯುಷ್ ಮಿಷನ್ ರಾಜ್ಯ ಮಿಷನ್ ನಿರ್ದೇಶಕ ಡಾ.ಡಿ.ಸಜಿತ್ ಬಾಬು, ವಾಸ್ತುಶಿಲ್ಪಿ ಹಾಗೂ ನಗರ ಯೋಜಕ ಪದ್ಮಶ್ರೀ ಡಾ.ಜಿ.ಶಂಕರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ವಿಷಯ ಮಂಡಿಸಿದರು.
ಸಿಪಿಸಿಆರ್‍ಐ ಪ್ರತಿನಿಧಿ ಡಾ.ರಮೇಶ, ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ, ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್, ಕಿನಾನೂರು ಕರಿಂದಳಂಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ, ಕಲ್ಲಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ನಾರಾಯಣನ್, ಮಾಜಿ ಸಂಸದ ಪಿ.ಕರುಣಾಕರನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎ.ಜಿ.ಸಿ.ಬಶೀರ್, ಇ.ಪದ್ಮಾವತಿ, ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕಿ ಎ.ಲಕ್ಷ್ಮಿ, ಕೆ.ಎಸ್.ಎಸ್.ಡಬ್ಲ್ಯೂಎಂ ಪ್ರತಿನಿಧಿ ಮಿಥುನ್ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ವಂದಿಸಿದರು.