ಬದಿಯಡ್ಕ: ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲ್‍ನಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕøತ ದಿನಾಚರಣೆಯ ಯುಪಿ ವಿಭಾಗದ ಸಂಘಗಾನ ಸ್ಪರ್ಧೆಯಲ್ಲಿ ಕಲ್ಲಕಟ್ಟ ಎಂ.ಎ.ಯು.ಪಿ.ಶಾಲೆ ಪ್ರಥಮ ಸ್ಥಾನವನ್ನು ಗಳಿಸಿದೆ. ವಿದ್ಯಾರ್ಥಿಗಳಾದ ಎಂ.ಆರ್.ಶ್ರದ್ಧಾ, ಪ್ರೀತಿಕಾ, ಶಾಹಿದಾ ಬಿ.ಎಂ., ವಂದ್ಯಾ ಕೆ., ಸಾತ್ವಿಕ ಜೆ.ಕೆ., ಜ್ಯೋತಿಕಾ ಹಾಗೂ ಶ್ರೀಜನ್ಯಾ ಭಾಗವಹಿಸಿದ್ದರು. ಸಂಸ್ಕøತ ಅಧ್ಯಾಪಿಕೆ ಶಾಲಿನಿ ವಳಕ್ಕುಂಜ, ಅನುಷಾ ಎಸ್. ನೇತೃತ್ವ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಮಿತಿ ಅಭಿನಂದನೆಯನ್ನು ಸಲ್ಲಿಸಿದೆ.