ಕಾಸರಗೋಡು: ಸಂಚರಿಸುತ್ತಿದ್ದ ರೈಲಿನ ಬೋಗಿಗೆ ಏಕಾಏಕಿ ನರಿಯೊಂದು ಡಿಕ್ಕಿಯಾಗಿದ್ದು, ಈ ಸಂದರ್ಭ ಕೇಳಿಬಂದ ಭಾರಿ ಶಬ್ದ ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಯಿತು. ಮಂಗಳೂರು-ಕಣ್ಣೂರು ಮಧ್ಯೆ ಸಂಚರಿಸುವ ಪ್ಯಾಸೆಂಜರ್ ರೈಲು ಕಾಸರಗೋಡಿನಿಂದ ಹೊರಟು ನೀಲೇಶ್ವರ ನಿಲ್ದಾಣದ ಪಡನ್ನಕ್ಕಾಡ್ ತಲುಪುತ್ತಿದ್ದಂತೆ ಎತ್ತರದ ದಿಣ್ಣೆಯಿಂದ ನರಿಯೊಂದು ಜಿಗಿದಿದ್ದು, ಇದು ಬೋಗಿಗೆ ಬಡಿದು ಭಾರಿ ಸದ್ದಿಗೆ ಕಾರಣವಾಗಿತ್ತು. ಕಿಡಿಗೇಡಿಗಳ ಕಲ್ಲು ತೂರಾಟದ ಆತಂಕದಲ್ಲಿದ್ದ ಪ್ರಯಾಣಿಕರಲ್ಲಿ ಇದು ಭೀತಿಯನ್ನು ಹುಟ್ಟುಹಾಕಿತ್ತು, ನಂತರ ನಡೆಸಿದ ತನಿಖೆಯಿಂದ ಇದು ನರಿ ಬೋಗಿಗೆ ಬಡಿದ ಶಬ್ದ ಎಂದು ತಿಳಿದುಬಂದಿತ್ತು.