ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಯೊಂದಿಗೆ ಬಂದಿದ್ದ ಪೊಲೀಸ್ ವಾಹನವು ನಟ ಕೃಷ್ಣಕುಮಾರ್ ಕಾರಿಗೆ ಡಿಕ್ಕಿಯಾಗಿದೆ. ಈ ಕುರಿತಂತೆ ನಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಂಸಿ ರಸ್ತೆಯ ಪಂದಳಂ ಮೂಲಕ ಪುತ್ತುಪಲ್ಲಿಯಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ನಂತರ ಕೃಷ್ಣಕುಮಾರ್ ಡಿಕ್ಕಿ ಹೊಡೆದ ಅದೇ ಕಾರಿನಲ್ಲಿ ಪಂದಳಂ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಅಪಾಯಕಾರಿಯಾಗಿ ವಾಹನ ಚಲಾಯಿಸಿ ಅಪಾಯಕ್ಕೆ ಸಿಲುಕಿಸಲು ಯತ್ನಿಸಿದ್ದು, ಇದೇನು ಎಂದು ಪ್ರಶ್ನಿಸಿದ್ದಕ್ಕೆ ನಿಂದಿಸಿದ್ದಾರೆ ಎಂದು ಕೃಷ್ಣಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಪುದುಪಲ್ಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿಯವರಿಗೆ ಬೆಂಗಾವಲಾಗಿ ಹೋಗುತ್ತಿದ್ದ ಪೊಲೀಸ್ ವಾಹನವೊಂದು ತಮ್ಮ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಪ್ರಶ್ನಿಸಿದಾಗ ವಾಹನದಲ್ಲಿದ್ದ ಪೊಲೀಸ್ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂದು ನಟ ಕೃಷ್ಣಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಕೃಷ್ಣಕುಮಾರ್ ಪಂದಳಂ ಪೊಲೀಸರಿಗೆ ದೂರು ನೀಡಿದ್ದಾರೆ.