ಮಂಜೇಶ್ವರ: ಮೀಯಪದವು ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ನ 12ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಶ್ರೀಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಗೌರವಾಧ್ಯಕ್ಷ ಪುಷ್ಪರಾಜ್.ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮವನ್ನು ಕೃಷಿಕ ಕೆ.ನಾರಾಯಣ ನಾಯ್ಕ್, ಕುಳೂರು ನಡುಹಿತ್ತಿಲು ದೀಪ ಬೆಳಗಿಸಿ, ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷ ಕೃಷ್ಣಪ್ರಸನ್ನ ಹಾಗೂ ಪ್ರಧಾನ ಕಾರ್ಯದರ್ಶಿ ರವಿಶಂಕರ್ ರಾವ್ ಉಪಸ್ಥಿತರಿದ್ದರು.
ಬಳಿಕ ವಿವಿಧ ಆಟೋಟ ಸ್ಫರ್ಧೆಗಳು, ಸಾಂಸ್ಕøತಿಕ ಸ್ಪರ್ಧೆಗಳು ಹಾಗೂ ಶ್ರೀಕೃಷ್ಣ ವೇಷ ಸ್ಪರ್ಧೆಗಳು ಜರಗಿದವು. ಸಂಜೆ ಶ್ರೀಕೃಷ್ಣ ವೇಷ ಮೆರವಣಿಗೆ ಶ್ರೀಮೊಗೇರ ದೈವ ಕ್ಷೇತ್ರದಿಂದ ಹೊರಟು ಶಾಲಾ ಮೈದಾನದವರೆಗೆ ಶ್ರೀಮಹಾಲಿಂಗೇಶ್ವರ ಮಕ್ಕಳ ಕುಣಿತ ಭಜನೆಯೊಂದಿಗೆ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ.ರಾಧಕೃಷ್ಣ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಮೋಹನ್ ಮಜ್ಜಾರ್, ಎಸ್.ವಿ.ವಿ ಎಚ್.ಎಸ್ ಶಾಲೆಯ ಸಂಚಾಲಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ವಿ.ಎ.ಯು.ಪಿ ಶಾಲಾ ಆಡಳಿತ ಸಲಹೆಗಾರ ಶ್ರೀಧರ್.ರಾವ್.ಆರ್.ಎಂ. ಹಾಗೂ ವಿ.ಎ.ಯು.ಪಿ ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕ್ಲಬ್ ನ ಗೌರವ ಸಲಹೆಗಾರ ಜನಾರ್ದನ್ ಎಸ್ ಹಾಗೂ ಅಧ್ಯಕ್ಷ ಕೃಷ್ಣಪ್ರಸನ್ನ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿಯಲ್ಲಿ ತೇರ್ಗಡೆಗೊಂಡ ಲಿಖಿತಾ ಎಂ.ಎಸ್, ಫಾತಿಮತ್ ಸಮ್ನ, ಸುಶ್ಮಿತಾ, ಜಯಪ್ರದಾ ಹಾಗೂ ಫಾತಿಮತ್ ತಸ್ಮಿನ್ ಇವರನ್ನು ಗೌರವಿಸಲಾಯಿತು. ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಕಿರಣ್ ಕುಮಾರ್ ಚಂಡಿತೋಟ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ ‘ಕಲ್ಜಿಗದ ಮಾಯ್ಕಾರೆ’ ಪಂಜುರ್ಲಿ ಎಂಬ ಪಾರ್ದನ ಆಧಾರಿತ ತುಳು ಭಕ್ತಿ ಪ್ರಧಾನ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.