ಬದಿಯಡ್ಕ : ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ರಸ್ತೆ ಬದಿ ನಿಂತಿದ್ದ ಮಹಿಳೆಗೆ ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. ವಳಮಲೆ ನಿವಾಸಿ ರಾಧಾಕೃಷ್ಣ ಶೆಟ್ಟಿ ಅವರ ಪತ್ನಿ ಸುನಿತಾ ಶೆಟ್ಟಿ(55)ಮೃತಪಟ್ಟ ಮಹಿಳೆ.
ಬುಧವಾರ ಸಂಜೆ ಬದಿಯಡ್ಕ ಪಏಟೆಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಭಾರಿ ಸಂಕ್ಯೆಯಲ್ಲಿ ಭಕ್ತಾದಿಗಳು ಒಟ್ಟು ಸಏರಿದ್ದು, ಈ ಸಂದರ್ಭ ರಸ್ತೆ ವಿಭಾಜಕದ ಮೇಲೆ ನಿಂತಿದ್ದ ಸಂದರ್ಭ ಟಿಪ್ಪರ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದರು. ಗಂಭೀರ ಗಾಐಗೊಂಡ ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.