ನವದೆಹಲಿ: ಅಲಾಸ್ಕಾ ಕರಾವಳಿಯ ಪೆಸಿಫಿಕ್ ಮಹಾಸಾಗರದ ಆಳದಲ್ಲಿ ಮೊಟ್ಟೆಯನ್ನು ಹೋಲುವ ನಿಗೂಢ ಚಿನ್ನದ ವಸ್ತುವೊಂದು ಪತ್ತೆಯಾಗಿದ್ದು, ವಿಜ್ಞಾನಿಗಳನ್ನು ಅಚ್ಚರಿಗೆ ದೂಡಿದೆ. ನ್ಯಾಷನಲ್ ಓಸಿಯನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ನ ಸಂಶೋಧನಾ ತಂಡವು ಆಗಸ್ಟ್ 30 ರಂದು ಮೊದಲ ಬಾರಿಗೆ ಈ ವಿಚಿತ್ರವಾದ ಚಿನ್ನದ ವಸ್ತುವನ್ನು ಪತ್ತೆಹಚ್ಚಿತು.
ಇದು ಯಾವ ವಸ್ತು ಇರಬಹುದು ಎಂಬುದೇ ಇದೀಗ ಬಹು ದೊಡ್ಡ ಕುತೂಹಲವಾಗಿದೆ. ಸೀಸ್ಕೇಪ್ ಅಲಾಸ್ಕಾ-5 ಸಾಗರ ಯಾತ್ರೆಯ ಸಮಯದಲ್ಲಿ ಅಳಿವಿನಂಚಿನಲ್ಲಿರುವ ಜ್ವಾಲಾಮುಖಿಯನ್ನು ಎರಡು ಮೈಲುಗಳಷ್ಟು ಆಳದಲ್ಲಿ ಅನ್ವೇಷಿಸುವಾಗ ಸಂಶೋಧಕರ ತಂಡವು ಹೊಳೆಯುವ ಚಿನ್ನದ ವಸ್ತುವನ್ನು ಕಂಡುಹಿಡಿದಿದೆ. ಇದು 10 ಸೆಂಟಿಮೀಟರ್‌ಗಳಷ್ಟು (4 ಇಂಚುಗಳು) ವ್ಯಾಸವನ್ನು ಹೊಂದಿದೆ ಮತ್ತು ಅದರ ತಳದ ಬಳಿ ಸಣ್ಣ ಹರಿತವನ್ನು ಹೊಂದಿರುತ್ತದೆ.
ಇದಕ್ಕೆ ಸಂಬಂಧಿಸಿದ ಫೋಟೋವನ್ನು ಎನ್ಒಎಎ ಓಸಿಯನ್ ಎಕ್ಸ್ಪ್ಲೋರೇಷನ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಚಿನ್ನದ ವಸ್ತು ಮೊಟ್ಟೆಯ ಕವಚವಾಗಿರಬಹುದು, ನಿನ್ನೆ ಇದನ್ನು ವೀಕ್ಷಿಸಿದ ಅನೇಕರಿಗೆ ಕಾಲ್ಪನಿಕ ಲೋಕದ ಅನುಭವ ನೀಡಿದೆ ಎಂದು ಅಡಿಬರಹ ನೀಡಲಾಗಿದೆ.
ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್; ಇಲ್ಲಿದೆ ವಿವರ..