HEALTH TIPS

ಕಾಂಗ್ರೆಸ್ಸ್ ನಲ್ಲಿ ಮತ್ತೆ ತಲೆಯೆತ್ತಿದ ವಾಕ್ಸಮರ

                     ತಿರುವನಂತಪುರಂ: ಲೋಕಸಭೆ ಚುನಾವಣೆ ಮುಂದಿರುವಂತೆಯೇ ರಾಜ್ಯ ಕಾಂಗ್ರೆಸ್‍ನಲ್ಲಿ ಗುಂಪುಗಾರಿಕೆ ಮತ್ತೆ ಗರಿಗೆದರಿದೆ. 

                   ವೇಣುಗೋಪಾಲ್ ಅವರು ರಾಜ್ಯ ನಾಯಕತ್ವದ ಹಿಡಿತ ಬಿಗುಗೊಳಿಸುತ್ತಿರುವಂತೆ ಅತೃಪ್ತಿ ಸ್ವರಗಳು ಹೊರಬರತೊಡಗಿದೆ.  

                    ಅಡೂರ್ ಪ್ರಕಾಶ್ ಮತ್ತು ಕೆ. ಮುರಳೀಧರನ್ ಅವರನ್ನು ಲೋಕಸಭೆಗೆ ಸ್ಪರ್ಧಿಸಬಾರದಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೆನ್ನಿತ್ತಲ, ಹೊಸ ಕದನದತ್ತ ಬೊಟ್ಟು ಮಾಡಿದರು. ಸದ್ಯದ ಗುಂಪು ಸಮೀಕರಣಗಳನ್ನು ಬದಲಾಯಿಸಿ ಜನರನ್ನು ತನ್ನೊಂದಿಗೆ ಕರೆತರುವ ತಂತ್ರ ಚೆನ್ನಿತ್ತಲ ಅವರ ಹೇಳಿಕೆ ಹಾಗೂ ತಂತ್ರಗಾರಿಕೆ ಎನ್ನಲಾಗಿದೆ. ಹಾಲಿ ಸಂಸದರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಎಐಸಿಸಿ ನಿರ್ಧರಿಸಿದೆ. ಆದರೆ ಕೆ. ಮುರಳೀಧರನ್ ಮತ್ತು ಅಡೂರ್ ಪ್ರಕಾಶ್ ಅವರು ವಿಧಾನಸಭೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ಕೆ. ಮುರಳೀಧರನ್ ಕೆಪಿಸಿಸಿ ಅಧ್ಯಕ್ಷ ಸ್ಥಾನದತ್ತ ದೃಷ್ಟಿ ನೆಟ್ಟಿದ್ದಾರೆ. ಹಾಲಿ ಅಧ್ಯಕ್ಷ ಕೆ. ಸುಧಾಕರನ್ ಆರೋಗ್ಯದ ಕಾರಣಕ್ಕಾಗಿ ಚಿಕಿತ್ಸೆಯಲ್ಲಿದ್ದಾರೆ.  ಕೇಂದ್ರ ನಾಯಕತ್ವವೂ ಅನುಮತಿ ನೀಡಿದೆ. ಹಾಗಾಗಿ ಕೆಪಿಸಿಸಿ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಕೆ.ಕೆ. ಮುರಳೀಧರನ್ ಹೆಜ್ಜೆ ಹಾಕುತ್ತಿದ್ದಾರೆ.

                   ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಚೆನ್ನಿತ್ತಲ ಇಬ್ಬರನ್ನೂ ತನ್ನ ಪಾಳೆಯಕ್ಕೆ ಕರೆತರುವ ಹುನ್ನಾರ ಆರಂಭಿಸಿದರು. ಕೆ. ಕರುಣಾಕರನ್ ಅವರ ಪ್ರಭಾವ ಎನ್ಎಸ್ಎಸ್ ನಲ್ಲಿ ಕೆ. ಮುರಳೀಧರನ್ ಅವರಿಗಿದೆ. ಮುರಳೀಧರನ್ ಅವರು ಮುಸ್ಲಿಂ ಸಮುದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅಡೂರ್ ಪ್ರಕಾಶ್ ಎಸ್ ಎನ್ ಡಿಪಿಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಹೀಗಾಗಿ ಇಬ್ಬರ ಆಸೆಗೂ ಒತ್ತಾಸೆಯಾಗಿ ಪಕ್ಷದಲ್ಲಿ ಮತ್ತೆ ವರ್ಚಸ್ಸು ಪಡೆಯಲು ಚೆನ್ನಿತ್ತಲ ಕಸರತ್ತು ನಡೆಸುತ್ತಿದ್ದಾರೆ.

                  ಎಐಸಿಸಿ ಸಂಘಟನೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೇಂದ್ರ ನಾಯಕತ್ವದಲ್ಲಿ ತಮ್ಮ ಪ್ರಭಾವವನ್ನು ಬಳಸಿಕೊಂಡು ರಾಜ್ಯ ಕಾಂಗ್ರೆಸ್‍ನ ಮೇಲೆ ಹಿಡಿತ ಸಾಧಿಸುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಪ್ರಭಾವವನ್ನು ಪಡೆಯಲು ಚೆನ್ನಿತ್ತಲ ಅವರ ಹೊಸ ನಡೆ ಚರ್ಚೆಗೊಳಗಾಗುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries