ಕೊಚ್ಚಿ: ಬೆಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಆರೋಪಿ ತಡಿಯಂತವಿಡೆ ನಜೀರ್, ದಕ್ಷಿಣ ಭಾರತದಲ್ಲಿ ಪ್ರಮುಖ ಭಯೋತ್ಪಾದನಾ ಚಟುವಟಿಕೆಗಳ ಆರೋಪ ಹೊತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಡೆದ ಮೂರನೇ ಭಯೋತ್ಪಾದನೆ ಸಂಬಂಧಿತ ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾನೆ.
2008ರಲ್ಲಿ ಕಣ್ಣೂರಿನ ಜವಾಹರ್ ಮುನ್ಸಿಪಲ್ ಸ್ಟೇಡಿಯಂನಲ್ಲಿ ರಂಜಾನ್ ಪ್ರಯುಕ್ತ ಆವರಣದಲ್ಲಿ ಆಹಾರ ಮತ್ತು ಇತರ ಮಳಿಗೆಗಳು ಕಾರ್ಯಾಚರಿಸುತ್ತಿರುವಾಗ ಬಾಂಬ್ ಇಟ್ಟಿದ್ದ ಪ್ರಕರಣದಲ್ಲಿ ಎರ್ನಾಕುಳಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಲ ಆತನನ್ನು ಖುಲಾಸೆಗೊಳಿಸಿದೆ. ಕೇರಳ ಪೋಲೀಸರು ಪ್ರಕರಣದ ತನಿಖೆ ನಡೆಸಿದ್ದರು.
ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಾಸಿಕ್ಯೂಷನ್ ಮಂಜೂರಾತಿ ನೀಡಲು ರಾಜ್ಯ ಸರ್ಕಾರ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಎರ್ನಾಕುಳಂ ನ್ಯಾಯಾಲಯವು ಕಣ್ಣೂರಿನ ತಯ್ಯಿಲ್ ಮೂಲದ ನಜೀರ್, ಅಂಡತೋಡ್‍ನ ಆರೋಪಿ ಶಫಾಸ್ ಶಂಸುದ್ದನ್ ಮತ್ತು ಕಣ್ಣೂರಿನ ಸಿಎಚ್ ನಗರದ ರಹ್ನಾಸ್ ಅವರನ್ನು ಖುಲಾಸೆಗೊಳಿಸಿದೆ. 1967ರ ಸ್ಫೋಟಕ ವಸ್ತುಗಳ ಕಾಯಿದೆ, 1908 ರ ಅಡಿಯಲ್ಲಿ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿರಲಿಲ್ಲ ಎನ್ನಲಾಗಿದೆ.
ಕಳೆದ ವರ್ಷ, ಕೋಝಿಕ್ಕೋಡ್ ಅವಳಿ ಸ್ಫೋಟ ಪ್ರಕರಣದಲ್ಲಿ ಶಫಾಸ್ ಮತ್ತು ನಜೀರ್ ಅವರನ್ನು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಖುಲಾಸೆಗೊಳಿಸಿತ್ತು.
2009ರಲ್ಲಿ ಕಣ್ಣೂರಿನ ಚೆಂಬಿಲೋಡ್ ಗ್ರಾಮದ ಮನೆಯೊಂದರಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಎರ್ನಾಕುಳಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನಜೀರ್ ನನ್ನು ಇತ್ತೀಚೆಗೆ ಖುಲಾಸೆಗೊಳಿಸಿತ್ತು. ಇತ್ತೀಚಿನ ಪ್ರಕರಣವು ಕಣ್ಣೂರಿನ ಜವಾಹರ್ ಕ್ರೀಡಾಂಗಣದ ಬಳಿಯ ಕೆಎಸ್‍ಇಬಿ ಟ್ರಾನ್ಸ್‍ಫಾರ್ಮರ್‍ನಿಂದ ಸ್ಫೋಟಕಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದರು.