ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕøತಿಕೋತ್ಸವವು 2023 ಡಿಸೆಂಬರ್ 23ರಿಂದ 2 ದಿನಗಳ ಕಾಲ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆತಿಥ್ಯದಲ್ಲಿ ಮುಳ್ಳೇರಿಯದ ಗಣೇಶ ಮಂದಿರ ಹಾಗೂ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಡೂರಿನ ಸತ್ಯಪ್ರೇಮ ಭಾರಿತ್ತಾಯರ ಮನೆಯಲ್ಲಿ ಇತ್ತೀಚೆಗೆ ನಡೆದ ಸಂಘಟನೆಯ ಜಿಲ್ಲಾ ಸಮಿತಿಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.
2023ರ ಅಕ್ಟೋಬರ್ 29, ನವೆಂಬರ್ 5, ನವಂಬರ್ 19 ಮತ್ತು ನವಂಬರ್ 26ರಂದು ಸಮುದಾಯದ ಸದಸ್ಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಿವಳ್ಳಿ ಬ್ರಾಹ್ಮಣ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ ಟಿ ಕೆ ವಹಿಸಿದ್ದರು. ಶಿವಳ್ಳಿ ಬ್ರಾಹ್ಮಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಡಾ. ಸೀತಾರಾಮ ಕಡಮಣ್ಣಾಯ ಬಂಬ್ರಾಣ , ಶಿವಳ್ಳಿ ಬ್ರಾಹ್ಮಣ ಜಿಲ್ಲಾ ಸಮಿತಿ ಖಜಾಂಜಿ ಶ್ರೀಪ್ರಕಾಶ್ ಪಾಂಙಣ್ಣಾಯ ಅಡೂರು, ಮಹಿಳಾ ಸಮಿತಿ ಹಾಗೂ ಯುವ ಸಂಘಟನೆಯ ಪದಾಧಿಕಾರಿಗಳು, ಜಿಲ್ಲೆಯ ಶಿವಳ್ಳಿ ಸಭಾದ ವಲಯ ಪದಾಧಿಕಾರಿಗಳು ಭಾಗವಹಿಸಿದ್ದರು.