ಬದಿಯಡ್ಕ: ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಶೋಭಾಯಾತ್ರೆಯು ಬದಿಯಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದಿಂದ ಹೊರಟು ಗಣೇಶಮಂದಿರದಲ್ಲಿ ಸಂಪನ್ನವಾಯಿತು. ಕೃಷ್ಣ ರಾಧೆಯರ ವೇಷಧರಿಸಿದ ಮಕ್ಕಳು, ಚೆಂಡೆಮೇಳ ಮೆರವಣಿಗೆಗೆ ಮೆರಗನ್ನು ನೀಡಿತು. ವಿವಿಧ ಬಾಲಗೋಕುಲಗಳ ವಿದ್ಯಾರ್ಥಿಗಳು ಕುಣಿತ ಭಜನೆಯಲ್ಲಿ ಪಾಲ್ಗೊಂಡರು.