ಕಿವಿನೋವು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿಯೇ ಕಾಣಿಸಿಕೊಳ್ಳುವುದು. ಕಿವಿ ನೋವು ಬಂದರೆ ಯಾವಾಗ ಬೆಳಗಾಗುವುದಪ್ಪಾ ಎಂದು ಒದ್ದಾಡಿ ಬಿಡುತ್ತೇವೆ. ಆ ಹೊತ್ತಿನಲ್ಲಿ ENT ಡಾಕ್ಟರ್ ಸಿಗುವುದು ತುಂಬಾನೇ ಅಪರೂಪ.
ಸಾಮಾನ್ಯವಾಗಿ ಶೀತ, ಕೆಮ್ಮು ಇಂಥ ಸಾಮಾನ್ಯ ಕಾಯಿಲೆಗಳಿಗೆ ಇಟ್ಟುಕೊಂಡಿರುತ್ತೇವೆ, ಆದರೆ ಕಿವಿ ನೋವಿಗೆ ಮನೆಯಲ್ಲಿ ಯಾವುದೇ ಔಷಧಿ ಇಟ್ಟುಕೊಂಡಿರುವುದಿಲ್ಲ, ಆದರೆ ಕಿವಿನೋವು ಸಹಿಸುವುದು ತುಂಬಾನೇ ಕಷ್ಟ. ಆವಾಗ ಕೆಲವೊಂದು ಮನೆಮದ್ದು ಟ್ರೈ ಮಾಡಿದರೆ ಕಿವಿನೋವು ಕಡಿಮೆಯಾಗುವುದು:ವಾರ್ಮ್ ಕಂಪ್ರೆಸ್
ಒಂದು ಚಿಕ್ಕ ಟವಲ್ ಅನ್ನು ಬಿಸಿ ನೀರಿಗೆ ಅದ್ದಿ, ನೀರನ್ನು ಹಿಂಡಿ ಟವಲ್ ಅನ್ನು ನೋವು ಇರುವ ಕಿವಿಯ ಹಿಂಬದಿಗೆ ಒತ್ತಿ ಹಿಡಿಯಿರಿ. ಆದರೆ ತುಂಬಾ ಬಿಸಿ ಇಡಬೇಡಿ, ಮೊದಲು ಕೈಯಲ್ಲಿ ಮುಟ್ಟಿ ನೋಡಿ, ನಂತರ ಒತ್ತಿ ಹಿಡಿಯಿರಿ. ಈ ರೀತಿ 10-15 ನಿಮಿಷ ಒತ್ತಿ ಹಿಡಿದರೆ ನೋವು ಸ್ವಲ್ಪ ಕಡಿಮೆಯಾಗುವುದು.
ತೆಂಗಿನೆಣ್ಣೆ ಎಣ್ಣೆ
ತೆಂಗಿನೆಣ್ಣೆ ಸ್ವಲ್ಪ ಬಿಸಿ ಮಾಡಿ ಒಂದರಿಂದ ಎರಡು ಹನಿ ಕಿವಿಗೆ ಹಾಕಿದರೆ ಗಟ್ಟಿಯಾಗಿರುವ ಕಿವಿಯ ಗುಗ್ಗೆ ಮೃದುವಾಗುವುದು. ಅದನ್ನು ಹೊರ ತೆಗೆದರೆ ನೋವು ಕಡಿಮೆಯಾಗುವುದು. ಆದರೆ ಕಿವಿಗೆ ಎಣ್ಣೆ ಹಾಕುವಾಗ ಎಣ್ಣೆ ತುಂಬಾ ಬಿಸಿ ಇರಬಹುದು. ಸ್ವಲ್ಪವೇ ಬಿಸಿ ಇರಬೇಕು. ತುಂಬಾ ಬಿಸಿ ಎಣ್ಣೆ ಹಾಕಿದರೆ ಕಿವಿಗೆ ಹಾನಿಯಾಗುವುದು, ಜಾಗ್ರತೆ. ಆದ್ದರಿಂದ ಸ್ವಲ್ಪವೇ ಸ್ವಲ್ಪ ಬಿಸಿ ಇರುವಾಗ ಮಾತ್ರ ಕಿವಿಗೆ ಎಣ್ಣೆ ಹಾಕಿ.
ಬೆಳ್ಳುಳ್ಳಿ ಎಣ್ಣೆ
ಎಣ್ಣೆಯನ್ನು ಕಾಯಿಸಿ ಅದಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ 30 ನಿಮಿಷ ಹಾಗೆಯೇ ಬಿಡಿ, ನಂತರ ಅದನ್ನು ಬಟ್ಟೆ ತುಂಡಿನಿಂದ ಸೋಸಿ ಆ ಎಣ್ಣೆಯನ್ನು ಕಿವಿಗೆ ಎರಡು ಹನಿ ಹಾಕಿ, ಹೀಗೆ ಮಾಡಿದರೆ ಕಿವಿ ನೋವು ಕಡಿಮೆಯಾಗುವುದು. ನೀವು ಎಣ್ಣೆಯನ್ನು ಸೋಸಿಯೇ ಹಾಕಬೇಕು, ಇಲ್ಲದಿದ್ದರೆ ಬೆಳ್ಳುಳ್ಳಿಯ ಚಿಕ್ಕ ಪೀಸ್ ಕಿವಿಯೊಳಗೆ ಹೋದರೆ ಮತ್ತಷ್ಟು ತೊಂದರೆಯಾಗುವುದು.
ಹೈಡ್ರೋಜನ್ ಪೆರಾಕ್ಸೈಡ್
ಶೇ. 3ರಷ್ಟು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಅಷ್ಟೇ ಪ್ರಮಾಣದ ನೀರಿಗೆ ಹಾಕಿ ಮಿಕ್ಸ್ ಮಾಡಿ. ನಂತರ ಅದನ್ನು ಇಯರ್ ಡ್ರಾಪರ್‌ಗೆ ಹಾಕಿ ಅದನ್ನು ಕಿವಿಗೆ ಹಾಕಿ. ಇದನ್ನು ಹಾಕುವುದರಿಂದ ಕಿವಿಯ ಗುಗ್ಗೆ ಹೊರಬರುವುದು.
ಈರುಳ್ಳಿ ಬಳಸಿ
ಈರುಳ್ಳಿಯನ್ನು ಕತ್ತರಿಸಿ ಅದನ್ನು ಪ್ಯಾನ್‌ನಲ್ಲಿ ಹಾಕಿ ಬಿಸಿ ಮಾಡಿ, ನಂತರ ಆ ಬಿಸಿ ಈರುಳ್ಳಿಯನ್ನು ಒಂದು ಕರ್ಚೀಫ್‌ನಲ್ಲಿ ಹಾಕಿ ಕಟ್ಟಿ, ನಂತರ ಅದನ್ನು ನೋವು ಇರುವ ಕಿವಿಯ ಹಿಂಬದಿಗೆ ಹಿಡಿಯಿರಿ. ತುಂಬಾ ಬಿಸಿಯಿದ್ದರೆ ಸ್ವಲ್ಪ ಬಿಸಿ ಕಡಿಮೆಯಾದ ಮೇಲೆ ಇಡಿ. ಹೀಗೆ ಮಾಡುವುದರಿಂದ ಏನಾದರೂ ಶೀತದಿಂದಾಗಿ ಕಿವಿ ನೋವಾಗುತ್ತಿದ್ದರೆ ಅದು ಕಡಿಮೆಯಾಗುವುದು.
ಹಬೆ ತೆಗೆಯಿರಿ ನೀವು ಕಿವಿ ನೋವು ಇದ್ದಾಗ ಸ್ಟೀಮ್ ತೆಗೆದುಕೊಂಡರೆ ನೋವು ಸ್ವಲ್ಪ ಕಡಿಮೆಯಾಗುವುದು. ನೋವು ನಿವಾರಕ ಮಾತ್ರೆ ತೆಗೆದುಕೊಳ್ಳಿ ತುಂಬಾ ನೋವು ಇದ್ದಾಗ ನಿಮ್ಮ ವೈದ್ಯರ ಸಲಹೆ ಮೇರೆಗೆ ನೋವು ನಿವಾರಕಗಳನ್ನು ತೆಗೆದುಕೊಳ್ಳಿ.