ಪೆರ್ಲ: ಇಡಿಯಡ್ಕ ಶ್ರೀ ವಿಷ್ಣುಮೂರ್ತಿ ಯುವಕ ಸಂಘ ಮತ್ತು ಶ್ರೀ ಉಳ್ಳಾಲ್ತೀ ಮಹಿಳಾ ಸಂಘ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮೊಸರುಕುಡಿಕೆ, ಮುಕ್ತ ಹಗ್ಗಜಗ್ಗಾಟ, ಶ್ರೀಕೃಷ್ಣ ವೇಷ ಹಾಗೂ ಇತರ ಸ್ಪರ್ಧೆಗಳು ಸೆ. 6ರಂದು ಬೆಳಗ್ಗೆ 9ರಿಂದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರುಗಲಿದೆ.
ಬೆಳಗ್ಗೆ 9ಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣರಾಜ ಪುಣಿಂಚಿತ್ತಾಯ ದೀಪೋಜ್ವಲನದೊಂದಿಗೆ ಕಾರ್ಯಕ್ರಮ ಉದ್ಘಾಟಿಸುವರು. ಬಜಕೂಡ್ಲು ಗಣೇಶ್ ಶೆಟ್ಟಿ ಮತ್ತು ಬಳಗದವರಿಂದ ಭಜನೆ ನಂತರ ವಿವಿಧ ಸ್ಪರ್ಧೆಗಳು ಆರಂಭಗೊಳ್ಳುವುದು.ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯುವುದು.