ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ, ಅಧ್ಯಾಪಕರಾಗಿ ಮೀಂಜ ಪ್ರದೇಶದ ವಿದ್ಯಾಭ್ಯಾಸ ಕ್ಷೇತ್ರದ ಧ್ರುವತಾರೆಯೆನಿಸಿಕೊಂಡಿದ್ದ ದಿ.ಯಂ ರಾಮಕೃಷ್ಣ ರಾವ್ ಅವರ 18ನೇ ಪುಣ್ಯತಿಥಿಯ ಸಂದರ್ಭ ಸಂಸ್ಮರಣೆ, ಸನ್ಮಾನ ಹಾಗೂ ನೂತನ ಕಟ್ಟಡ ಬಾಗೀರಥಿಯ ಉದ್ಘಾಟನೆ ಕಾರ್ಯಕ್ರಮ ಸೆ. 25 ರಂದು ಸೋಮವಾರ ಶಾಲಾ ಯಂ.ರಾಮಕೃಷ್ಣ ರಾವ್ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡಿನ ವಿದ್ಯಾಭ್ಯಾಸ ಉಪನಿರ್ದೇಶಕ ನಂದಿಕೇಶನ್.ಎನ್ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಶಾಲಾ ಹಳೆವಿದ್ಯಾರ್ಥಿ ಹಾಗೂ ಕೊಡುಗೈ ದಾನಿ ಸದಾಶಿವ ಶೆಟ್ಟಿ ಕುಳೂರು,ಕನ್ಯಾನ ಇವರು ಸನ್ಮಾನ ಸ್ವೀಕರಿಸಲಿದ್ದಾರೆ ಹಾಗೂ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಕಾಸರಗೋಡಿನ ಖ್ಯಾತ ವೈದ್ಯ ಡಾ.ಬಿ. ಎಸ್.ರಾವ್ ಮತ್ತು ಭಾರತೀಯ ಭೂ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ ಪ್ರಾಸ್ತಾವಿಕವಾಗಿ ಮಾತನಾಡುವರು. ಈ ಸಂದರ್ಭ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಹಾಗೂ ಮಾಸ್ಟರ್ಸ್ ಮೀಯಪದವು ಅರ್ಪಿಸುವ ಯೋಗೀಶ್ ರಾವ್ ಚಿಗುರುಪಾದೆ ರಚಿಸಿದ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶಿಸಿ ಅಭಿನಯಿಸುವ ‘ಉಳ್ಳಾಲ ರಾಣಿ ಅಬ್ಬಕ್ಕ’ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.