ಬದಿಯಡ್ಕ: ಕೋಟ್ಟಯಂನ ಪುದುಪಳ್ಳಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಚಾಂಡಿ ಉಮ್ಮನ್ ಬಹುಮತದ ಅಂತರದಲ್ಲಿ ವಿಜಯಶಾಲಿಯಾದುದರ ಹಿನ್ನೆಲೆಯಲ್ಲಿ ಬದಿಯಡ್ಕ ಯುಡಿಎಫ್ ಘಟಕದ ನೇತೃತ್ವದಲ್ಲಿ ಶುಕ್ರವಾರ ವಿಜಯೋತ್ಸವ ನಡೆಯಿತು.
ನೇತಾರಾದ ಮಾಹಿನ್ ಕೇಳೋಟ್, ಪಿ.ಜಿ. ಚಂದ್ರಹಾಸ ರೈ, ನಾರಾಯಣ ಎಂ, ಸಿ.ಎ. ಅಬೂಬಕ್ಕರ್, ತಿರುಪತಿ ಕುಮಾರ್ ಭಟ್, ಶ್ಯಾಮ್ ಪ್ರಸಾದ್ ಮಾನ್ಯ, ಶಾಫಿ ಗೋಳಿಯಡ್ಕ, ಅಬ್ದುಲ್ಲ ಚಲ್ಲಕ್ಕೆರೆ, ಜನಪ್ರತಿನಿಧಿಗಳು, ಯುವ ಕಾಂಗ್ರೆಸ್ ನೇತಾರರು, ಕಾರ್ಯಕರ್ತರು ಮೆರವಣಿಗೆಗೆ ನೇತೃತ್ವ ನೀಡಿದರು. ಸಿಹಿತಿಂಡಿ ಹಂಚಿ, ಪಟಾಕಿ ಸಿಡಿಸಿ ಹರ್ಷಾಚರಣೆ ವ್ಯಕ್ತಪಡಿಸಲಾಯಿತು.