HEALTH TIPS

ಕಾಲನ್ನು ನೀರಿನಲ್ಲಿಟ್ಟರೆ ಮೈಗ್ರೇನ್ ತಲೆನೋವು ಕಡಿಮೆಯಾಗುವುದೇ?

 ಇತ್ತೀಚೆಗೆ ನಮ್ಮ ಜೀವನ ಕ್ರಮದಿಂದ ಇರಬಹುದು ಅಥವಾ ಅತಿಯಾದ ಒತ್ತಡದ ಜೀವನದಿಂದ ಇರಬಹುದು. ಬಹುತೇಕ 70% ನಷ್ಟು ಜನ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದಾರೆ. ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳುವುದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಆಗಾಗ್ಯೂ ಮಧ್ಯಮಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವೈದ್ಯರು ಕೂಡ ಮೈಗ್ರೇನ್ ತಲೆನೋವು ಬರುವುದಕ್ಕೆ ನಿಖರವಾದ ಕಾರಣ ತಿಳಿಸುವುದಿಲ್ಲ ಯಾಕೆಂದರೆ ಒಬ್ಬೊಬ್ಬರಲ್ಲಿ ಒಂದೊಂದು ಕಾರಣಕ್ಕೆ ಮೈಗ್ರೇನ್ ಉಂಟಾಗಬಹುದು. ಒಂದು ವೇಳೆ ಮೈಗ್ರೇನ್ ತಲೆನೋವು ಬಂದರೆ ಅದರಿಂದ ಎಷ್ಟು ಕಿರಿಕಿರಿ ಉಂಟಾಗುತ್ತದೆ, ಎಹ್ಟು ನೋವಾಗುತ್ತದೆ ಎನ್ನುವುದು ಮೈಗ್ರೆನ್ ಅನುಭವಿಸಿದವರಿಗೆ ಮಾತ್ರ ಗೊತ್ತು.


ಯಾವುದೇ ಔಷಧೋಪಚಾರ ಮಾಡಿದರು ಕೂಡ ಮೈಗ್ರೇನ್ ನೋವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ ಎಲ್ಲಾ ಚಿಕಿತ್ಸೆಗಳು ತಾತ್ಕಾಲಿಕ ಚಿಕಿತ್ಸೆಗಳಾಗಿರುತ್ತವೆ ಅಷ್ಟೇ. ಹಾಗಾಗಿ ಔಷಧಿಗಳಿಗೆ ಹೆಚ್ಚು ಖರ್ಚು ಮಾಡುವುದಕ್ಕಿಂತ ನೀವು ಮನೆಯಲ್ಲಿ ಕೆಲವು ಮನೆಮದ್ದುಗಳನ್ನು ಮಾಡಿಕೊಂಡು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬಹುದು.

ಹಲವು ವರ್ಷಗಳಿಂದಲೂ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವವರು ಇದ್ದಾರೆ. ಇದು ನಮ್ಮನ್ನು ಸಂಪೂರ್ಣವಾಗಿ ದುರ್ಬಲರನ್ನಾಗಿ ಮಾಡಿಬಿಡುತ್ತದೆ ತಲೆ ನೋವು ಹೆಚ್ಚಾದ್ರೆ ಪಡಬಾರದ ಕಷ್ಟ ಪಡಬೇಕು ವಾಕರಿಕೆ, ಸುಸ್ತು, ನಿದ್ರೆ ಬಾರದೇ ಇರುವುದು, ಕೆಲಸ ಮಾಡಲು ಸಾಧ್ಯವಾಗದೆ ಇರುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ನೀವು ಮನೆಯಲ್ಲಿಯೇ ಇಂತದ್ದೊಂದು ಪ್ರಯತ್ನ ಮಾಡಿ ನೋಡಿ. ಯುನೈಟೆಡ್ ಸ್ಟೇಟ್ಸ್ ಮೇರಿ ಲ್ಯಾಂಡ್ ನಲ್ಲಿ ವೈದ್ಯ ವೃತ್ತಿಯನ್ನು ನಡೆಸುತ್ತಿರುವ ಡಾಕ್ಟರ್ ಒಬ್ಬರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಹಾಗಾದ್ರೆ ಈ ವೈದ್ಯರು ಕೂಡ ಸೂಚಿಸುವ ಆ ಮನೆ ಮದ್ದು ಯಾವುದು ನೋಡೋಣ.

ಬಿಸಿನೀರಿನಲ್ಲಿ ಪಾದಗಳನ್ನು ಅದ್ದಿ:
ಮೈಗ್ರೇನ್ ತಲೆನೋವಿನ ಅಸ್ವಸ್ಥತೆಯನ್ನು ಹೋಗಲಾಡಿಸಲು ಈ ಮನೆ ಮದ್ದು ಬಹಳ ಉಪಯೋಗಕಾರಿಯೆನ್ನಬಹುದು. ಮೈಗ್ರೇನ್, ಮೆದುಳಿನ ಒಂದು ಬದಿಯಲ್ಲಿ ಮಧ್ಯಮದಿಂದ ತೀವ್ರವಾಗಿರುವ ಥ್ರೋಬಿಂಗ್ ನೋವಿನ ಪುನರಾವರ್ತನೆಯಾಗಿದೆ ಅಂದರೆ ಈ ಅತಿಯಾದ ಥ್ರೋಬೊಂಗ್ ನೋವನ್ನು ತೊಡೆದು ಹಾಕಲು ನಿಮಗೆ ಹಲವು ಸಮಯಬೇಕು.

ಇನ್ನು ಈ ರೀತಿಯಾಗಿ ತಲೆನೋವು ಬಂದಾಗ ಐಸ್ ಪ್ಯಾಕ್ ಚಿಕಿತ್ಸೆಯನ್ನು ಹಲವರು ಮಾಡುತ್ತಾರೆ. ಹಾಗೆ ನೀವು ಕೂಡ ಐಸ್ ಪ್ಯಾಕ್ ನ್ನು ನೀವು ಹಣೆ ಮ್ಲೆ ಇಟ್ಟುಕೊಳ್ಳುವ ಮೂಲಕ ಚಿಕಿತ್ಸೆ ಮಾಡುತ್ತಿದ್ದರೆ ಈಗ ತಂಪಾಗಿರುವ ನೀರಿನಿಂದ ಬಿಸಿ ನೀರಿಗೆ ಶಿಫ್ಟ್ ಆಗಿ. ಐಸ್ ಪ್ಯಾಕ್ ಬದಲಿಗೆ ಬಿಸಿ ನೀರಿನ ಚಿಕಿತ್ಸೆ ಆರಂಭಿಸಿ. ಇದಕ್ಕಾಗಿ ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ಇಡಬೇಕು.

ಪಾದಗಳನ್ನು ಬಿಸಿನೀರಿನಲ್ಲಿ ಇಡುವ ಚಿಕಿತ್ಸೆ ಮಾಡಿಕೊಳ್ಳುವುದು ಹೇಗೆ?
ಕಾಲಿನ ಪಾದಗಳು ಮುಳುಗುವಷ್ಟು ಹಾಗೂ ಬಿಸಿಯನ್ನು ತಡೆದುಕೊಳ್ಳುವಷ್ಟು ಬಿಸಿ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಅದರಲ್ಲಿ ನಿಮ್ಮ ಪಾದಗಳನ್ನು ಇಡಿ ಬಿಸಿನೀರು ತಣ್ಣಗಾಗುವವರೆಗೂ ಈ ಕ್ರಿಯೆ ಮುಂದುವರೆಸಬಹುದು. ಈ ಚಿಕಿತ್ಸೆಯಿಂದ ಕಾಲಿನ ಪಾದಗಳ ನರಗಳು ರಕ್ತದ ಅಪಧಮನಿ ಕಿರಿದಾಗುವಂತೆ ಮಾಡುತ್ತದೆ. ಇದರಿಂದ ತಲೆಯ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪಾದಗಳನ್ನು ಬಿಸಿ ನೀರಿನಲ್ಲಿ ನೆನೆಸುವುದು ಅತ್ಯುತ್ತಮ ಪರಿಹಾರವಾಗಿದೆ ಇದು ಪಾದಗಳಲ್ಲಿನ ರಕ್ತನಾಳಗಳು ಹಿಗ್ಗುವಂತೆ ಮಾಡುತ್ತದೆ. ರಕ್ತನಾಳಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಹಾಗಾಗಿ ಮೈಗ್ರೇನ್ ತಲೆನೋವು ನಿವಾರಣೆ ಆಗುತ್ತದೆ.

ಈ ಮನೆ ಮದ್ದಿನಿಂದ ಅಡ್ಡ ಪರಿಣಾಮ ಇದೆಯೇ?
ಸಾಕಷ್ಟು ಜನ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವವರಲ್ಲಿ ಒಂದು ಆತಂಕ ಇರುತ್ತದೆ. ನಾವು ಯಾವುದಾದರೂ ಔಷಧಿ ಅಥವಾ ಮನೆ ಮದ್ದು ಮಾಡಿದರೆ ಅದರಿಂದ ನೋವು ಎನ್ನುವ ಅನುಮಾನ ಇರುತ್ತದೆ ಆದರೆ ನಾವು ಈಗ ಹೇಳಿರುವ ಬಿಸಿನೀರಿನಲ್ಲಿ ಪಾದ ನೆನೆಸುವ ಮನೆಮದ್ದಿನಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಇದು ಬಹಳ ಹಳೆಯ ಪದ್ಧತಿ ಆಗಿರುವುದರಿಂದ ವೈದ್ಯರು ಕೂಡ ಈ ಪರಿಹಾರವನ್ನು ಸೂಚಿಸುತ್ತಾರೆ. ಇಷ್ಟಾಗಿಯೂ ನಿಮ್ಮಲ್ಲಿ ಭಯ ಇದ್ದರೆ, ಕಾಲನ್ನು ಬಿಸಿ ನೀರಿನಲ್ಲಿ ಇಟ್ಟು ಚಿಕಿತ್ಸೆ ಮಾಡಿಕೊಳ್ಳುವುದಕ್ಕಿಂತಲೂ ಮೊದಲು ವೈದ್ಯರನ್ನು ಸಂಪರ್ಕಿಸಬಹುದು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries