HEALTH TIPS

ನೆಹರೂ ಬದಲಿಗೆ ಬೋಸ್ ರನ್ನು ಮೊದಲ ಪ್ರಧಾನಿ ಎಂದು ಘೋಷಿಸಿ: ಪ್ರಧಾನಿ ಮೋದಿಗೆ ಸ್ವಾಮಿ ಆಗ್ರಹ

           ನವದೆಹಲಿ: ಪ್ರಧಾನಿ ಮೋದಿಯವರು ಮರುನಾಮಕರಣ ಮಾಡುವ ಹುನ್ನಾರದಲ್ಲಿದ್ದಾರೆ. ಹೀಗಾಗಿ ಜವಾಹರ್ ಲಾಲ್ ನೆಹರೂ ಅವರ ಬದಲಿಗೆ ಸ್ವತಂತ್ರ್ಯ ಸೇನಾನಿ ಸುಭಾಶ್ ಚಂದ್ರ ಬೋಸ್ ರನ್ನು ಮೊದಲ ಪ್ರಧಾನಿ ಎಂದು ಘೋಷಣೆ ಮಾಡಿ ಎಂದು ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.


               ಸುಭಾಷ್ ಚಂದ್ರ ಬೋಸ್ ಅವರನ್ನು 1943ರ ಭಾರತದ ಮೊದಲ ಪ್ರಧಾನಿ ಎಂದು ಘೋಷಿಸಬೇಕು. ಸುಭಾಶ್ ಚಂದ್ರ ಬೋಸ್ ಅವರು ಅಂದು ಹೋರಾಡಿದ್ದು ಕಠಿಣವಾಗಿತ್ತು. ಬ್ರಿಟಿಷ್ ಸಹಭಾಗಿತ್ವದಲ್ಲಿ ನೆಹರು ವಂಚನೆಯ ಮೂಲಕ ಪಡೆದುಕೊಂಡಿರುವಂಥದ್ದಲ್ಲ ಎಂದು ಹೇಳಿದ್ದಾರೆ. 

              ರಿಪಬ್ಲಿಕ್ ಆಫ್ ಇಂಡಿಯಾ ಬದಲಿಗೆ ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಮಾಡುವ ಕುರಿತು ಈಗ ದೇಶದಲ್ಲಿ ಚರ್ಚೆ ಶುರುವಾಗಿದೆ. ಇನ್ನು ಕೇಂದ್ರ ಸರ್ಕಾರ ಇದೇ ತಿಂಗಳು ಕರೆದಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಸಂವಿಧಾನದಲ್ಲಿ ಬಳಸಲಾಗಿರುವ ಇಂಡಿಯಾ ಪದ ಬದಲಿಗೆ ಭಾರತ ಎಂದು ಸೇರಿಸುವ ಬಗ್ಗೆ ವಿಧೇಯವನ್ನು ಮಂಡಿಸಲಿದೆ ಎಂದು ಹೇಳಲಾಗುತ್ತಿದೆ.

             ಇಂಡಿಯಾ ಬದಲಿಗೆ ಭಾರತ್ ಎಂದು ಮರುನಾಮಕರಣ ಮಾಡುತ್ತಿರುವ ಬಗ್ಗೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ವಿಪಕ್ಷಗಳು ತಮ್ಮ ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿರುವುದಕ್ಕೆ ಹೆದರಿ ಕೇಂದ್ರ ಸರ್ಕಾರ ಇಂಡಿಯಾ ಬದಲಿಗೆ ಭಾರತ್ ಎಂದು ಮರುನಾಮಕರಣ ಮಾಡುತ್ತಿದೆ ಎಂದು ಆರೋಪಿಸುತ್ತಿವೆ.

               ರಾಷ್ಟ್ರಪತಿಗಳ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ ದ್ರೌಪದಿ ಮುರ್ಮು ಅವರನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಕರೆಯಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದು ಸಂವಿಧಾನ ಒಂದನೇ ವಿಧಿಯಡಿ, ಭಾರತ, ಅದು ಇಂಡಿಯಾ, ರಾಜ್ಯಗಳ ಒಕ್ಕೂಟ ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಈ ರಾಜ್ಯಗಳ ಒಕ್ಕೂಟ ಆಕ್ರಮಣಕ್ಕೆ ಒಳಗಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries