ಎರ್ನಾಕುಳಂ: ಪೋಲೀಸ್ ಅಧಿಕಾರಿಗಳು ಮನೆಯಿಂದಲೇ ಸಮವಸ್ತ್ರ ಧರಿಸಿ ಠಾಣೆಗೆ ಬರುವಂತೆ ಸೂಚಿಸಿರುವ ಎರ್ನಾಕುಳಂ ಡಿಐಜಿ ಸುತ್ತೋಲೆ ವಿವಾದಕ್ಕೀಡಾಗಿದೆ.
ಡಿಐಜಿ ಪುಟ್ಟ ವಿಮಲಾದಿತ್ಯ ಅವರ ಸುತ್ತೋಲೆ ವಿವಾದಕ್ಕೀಡಾಗಿದೆ. ಕೊಟ್ಟಾಯಂ, ಅಲಪ್ಪುಳ ಮತ್ತು ಇಡುಕ್ಕಿ ಜಿಲ್ಲೆಗಳ ಪೋಲೀಸ್ ಠಾಣೆಗಳಿಗೆ ಸುತ್ತೋಲೆ ಬಂದಿದೆ. ಸುತ್ತೋಲೆ ನಂತರ ಪೋಲೀಸ್ ಅಧಿಕಾರಿಗಳು ಪ್ರತಿಭಟನೆಗೆ ಮುಂದಾದರು. ಪ್ರತಿಭಟನೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪೋಲೀಸ್ ಅಧಿಕಾರಿಗಳು ವ್ಯಕ್ತಪಡಿಸಿರುವರು.
ಸುತ್ತೋಲೆಯ ಪ್ರಕಾರ, ಅನೇಕ ಠಾಣೆಗÀಳ ವಿಶ್ರಾಂತಿ ಕೊಠಡಿಗಳು ಟೋಪಿಗಳು, ಶೂಗಳು ಮತ್ತು ಹಳೆಯ ವಸ್ತುಗಳನ್ನು ರಾಶಿ ಹಾಕುವ ಸ್ಥಳಗಳಾಗಿವೆ. ಅಲ್ಲದೆ ವಿಶ್ರಾಂತಿ ಕೊಠಡಿಗಳ ಚಿತ್ರಗಳನ್ನು ಸುತ್ತೋಲೆಯಲ್ಲಿ ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳ 30ರೊಳಗೆ ಎಲ್ಲ ಠಾಣೆಗಳ ವಿಶ್ರಾಂತಿ ಕೊಠಡಿಗಳನ್ನು ಸ್ವಚ್ಛಗೊಳಿಸಿ ಚಿತ್ರ ಸಹಿತ ವರದಿ ನೀಡುವಂತೆ ಸೂಚಿಸಲಾಗಿದೆ.
ಮನೆಯಿಂದಲೇ ಸಮವಸ್ತ್ರ ಧರಿಸಿ ಠಾಣೆಗೆ ಬರಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮನೆಯಿಂದ ಸಮವಸ್ತ್ರ ಧರಿಸಿ ಹಿಂತಿರುಗುವವರೆಗೆ ಸಮವಸ್ತ್ರದಲ್ಲಿಯೇ ಇರುವುದರಿಂದ ತೊಂದರೆಯಾಗುತ್ತದೆ ಎಂಬುದು ಪೋಲೀಸ್ ಅಧಿಕಾರಿಗಳ ವಾದ.
ಪೋಲೀಸರು ಹೇಳುವಂತೆ, ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಠಾಣೆಗಳÀಲ್ಲಿ ಬಟ್ಟೆ ಬದಲಾಯಿಸಬೇಕಾದ ಸಂದರ್ಭಗಳು ಹೆಚ್ಚಾಗಿವೆ. ವಿವಿಧ ಸಂದರ್ಭಗಳಿಂದ ನಿರಂತರವಾಗಿ ಕೆಲಸ ಮಾಡುವಾಗ ಸಮವಸ್ತ್ರ ಬದಲಿಸಿ ವಿಶ್ರಾಂತಿ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎನ್ನುತ್ತಾರೆ ಅಧಿಕಾರಿಗಳು.