ಬದಿಯಡ್ಕ: ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರು, ತಮ್ಮ ಮಠದ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು, ದೇವರ ಉಪಾಸನೆ, ಸಮಾಜ ಸಂಘಟನೆ, ಕಲಾಸಕ್ತಿಗಳಿಂದ ತಮ್ಮ ಸನ್ಯಾಸಿ ದೀಕ್ಷೆಯನ್ನ ಪೂರ್ತಿಕರಿಸಿದ ಯತಿ ಶ್ರೇಷ್ಠರಾಗಿದ್ದಾರೆಂದು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಅವರು ಎಡನೀರು ಮಠದಲ್ಲಿ ಜರಗಿದ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳ ತೃತೀಯ ಆರಾಧನಾ ಮಹೋತ್ಸವದ ಸಂದಭರ್ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಡಾ. ರಮಾನಂದ ಬನಾರಿ ಗುರುಸ್ಮರಣೆಯ ನುಡಿಗಳನ್ನಾಡಿದರು. ಶ್ರೀ ಕೇಶವಾನಂದ ಭಾರತೀ ಗೌರವವನ್ನು ಹಿರಿಯ ವಕೀಲ ಐ. ವಿ.ಭಟ್, ಹಾಗೂ ಸಪ್ತತಿ ಗೌರವವನ್ನು ವೆಂಕಟ್ರಮಣ ಪೋತ್ತಿ ನಾಗರಕೋವಿಲ್ ಅವರಿಗೆ ನೀಡಿ ಗೌರವಿಸಲಾಯಿತು. ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನ ಭಾಷಣ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ್ ನಾಯಕ್ ಪುಣೆ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಟಿ. ಶಾಮ ಭಟ್ ಸ್ವಾಗತಿಸಿ, ಎಡನೀರು ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಕಾರ್ಯದರ್ಶಿ ಕೆಯ್ಯೂರು ನಾರಾಯಣ ಭಟ್ ನಿರೂಪಿಸಿದರು. ರಾತ್ರಿ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಜರಗಿತು.