ತಿರುವನಂತಪುರಂ: ಪೂಜಾಪ್ಪುರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಮೊಬೈಲ್ ಪೋನ್ ಬಳಸಲು ಅಧಿಕಾರಿಗಳು ಸಹಾಯ ಮಾಡಿದ್ದಾರೆ.
ಕೊಲೆ ಪ್ರಕರಣದ ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್ ಪೋನ್ ಕೇಂದ್ರೀಕರಿಸಿ ಪೂಜಾಪುರ ಪೋಲೀಸರು ನಡೆಸಿದ ತನಿಖೆಯಲ್ಲಿ ಅಧಿಕಾರಿಗಳ ಕೈವಾಡ ಇರುವುದು ಹೊರಜಗತ್ತಿಗೆ ಗೊತ್ತಾಗಿದೆ. ಉಪ ಕಾರಾಗೃಹ ಅಧೀಕ್ಷಕರು ಕೂಡ ಕೈದಿಗಳ ಸಹಾಯಕ್ಕೆ ಪ್ರತಿಫಲವಾಗಿ ಹಣ ಪಡೆದಿರುವುದಾಗಿ ಪೋಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಕಳೆದ ತಿಂಗಳು ಪೂಜಾಪುರ ಜೈಲಿನಲ್ಲಿ ನಡೆಸಿದ ಶೋಧದ ವೇಳೆ ಸಿಮ್ ಕಾರ್ಡ್ ಇರುವ ಮೊಬೈಲ್ ಪತ್ತೆಯಾಗಿತ್ತು. ಪೋಲೀಸರು ನಡೆಸಿದ ತನಿಖೆಯಲ್ಲಿ ಮೊಬೈಲ್ ಬಳಸುತ್ತಿದ್ದ ರಿಯಾಜ್ ಕೊಲೆ ಪ್ರಕರಣದ ಆರೋಪಿ ಎಂಬುದು ಪತ್ತೆಯಾಗಿದೆ. ಪೋನ್‍ಗೆ ಬಂದ 43 ಕರೆಗಳಲ್ಲಿ ಮೂರು ಜೈಲು ಅಧೀಕ್ಷಕರಿಂದ ಬಂದಿದ್ದು, ಪೂಜಾಪುರ ಪೆÇಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಅಧೀಕ್ಷಕರು ಕೈದಿಗಳಿಗೆ ತಮ್ಮ ಮೊಬೈಲ್ ಪೋನ್‍ಗಳನ್ನು ರೀಚಾರ್ಜ್ ಮಾಡಲು ಮತ್ತು ಕೆಲಸಕ್ಕಾಗಿ ಬಿಡುಗಡೆ ಮಾಡುವಾಗ ಬ್ಯಾಟರಿಯನ್ನು ಚಾರ್ಜ್ ಮಾಡಲು ಪೋನ್ ಬಳಸಲು ಅನುಮತಿಸಿದ್ದಾರೆ ಎಂದು ಒಪ್ಪಿಕೊಂಡರು. ಇದಕ್ಕೆ ಪ್ರತಿಯಾಗಿ ಕೈದಿಗಳ ಸಂಬಂಧಿಕರ ಖಾತೆಯಿಂದ ಸಂತೋಷ್ ಅವರ ಪತ್ನಿ ಖಾತೆಗೆ 69 ಸಾವಿರ ರೂಪಾಯಿ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಜೈಲು ಶಿಕ್ಷೆ ಅನುಭವಿಸುತ್ತಿರುವ ರಿಯಾಜ್ ನನ್ನು ವಿಚಾರಣೆ ನಡೆಸಿದಾಗ ಹೆಚ್ಚಿನ ಮಾಹಿತಿ ಸಿಕ್ಕಿದೆ.
ಪೋಲೀಸ್ ವರದಿ ಆಧರಿಸಿ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿದೆ. ಮೊಬೈಲ್ ಫೆÇೀನ್ ಇಲ್ಲದೇ ಜೈಲಿನೊಳಗೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದು, ಕೈದಿಗಳಿಂದ ಅಧಿಕೃತ ನೆರವು ಪಡೆದಿರುವ ಆರೋಪವಿದೆ.