HEALTH TIPS

ಮಾಜಿ ಶಾಸಕ, ಸಮಾಜವಾದಿ ನಾಯಕ ಎಂ.ಕೆ.ಪ್ರೇಮನಾಥ್ ನಿಧನ

              ಕೋಝಿಕ್ಕೋಡ್: ಸಮಾಜವಾದಿ ನಾಯಕ, ಮಾಜಿ ಶಾಸಕ ಹಾಗೂ ಎಲ್‍ಜೆಡಿ ರಾಜ್ಯ ಉಪಾಧ್ಯಕ್ಷ ಎಂ.ಕೆ.ಪ್ರೇಮನಾಥ್ (73) ನಿಧನರಾಗಿದ್ದಾರೆ.

         ಅವರು ಒಂದು ವಾರದಿಂದ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

          2006ರಿಂದ 2011ರವರೆಗೆ ವಡರರದಲ್ಲಿ ಶಾಸಕರಾಗಿದ್ದರು. ಯುವ ಜನತಾದಳ ರಾಜ್ಯ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಸಮಿತಿ ಸದಸ್ಯರಾಗಿ, ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹಾಗೂ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

            ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಚೋಂಬಳದ ದಿವಂಗತ ಕುಂಞಂಪತ್ ನಾರಾಯಣಕುರುಪ್. ತಾಯಿ: ದಿವಂಗತ ಪದ್ಮಾವತಿ ಅಮ್ಮ. ಪತ್ನಿ ದಿವಂಗತ ಟಿ.ಸಿ.ಪ್ರಭಾ. ಮಗಳು: ಡಾ.ಪ್ರಿಯಾ. ಅಳಿಯ: ಕಿರಣ್ ಕೃಷ್ಣ (ದುಬೈ). ಒಡಹುಟ್ಟಿದವರು: ಬಾಬು ಹರಿಪ್ರಸಾದ್, ಶೋಭನಾ, ರಮಣಿ, ಲೇಟ್ ಸೇತುಕೃಷ್ಣನ್ ಮತ್ತು ಚಂದ್ರಮಣಿ ಅವರನ್ನು ಅಗಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries