ಕುಂಬಳೆ: ಕಾಸರಗೋಡು ಹೈನುಗಾರಿಕೆ ಅಭಿವೃದ್ಧಿ ಇಲಾಖೆಯಡಿ, ಕುಂಬಳೆ ರೀಜನಲ್ ಲೇಬೋರೇಟರಿಯಲ್ಲಿ ಹಾಲು, ಹಾಲಿನ ಉತ್ಪನ್ನಗಳ ಮೈಕ್ರೋಬಯಾಲಜಿ ಕೆಮಿಕಲ್ ಪರೀಕ್ಷೆಯನ್ನು ನಡೆಸಲು, ಕ್ಯಾಲಿಬರೇಶನ್ ನಡೆಸಲು ಮತ್ತು ನೀರಿನ ಗುಣಮಟ್ಟದ ಪರೀಕ್ಷೆಯನ್ನು ನಡೆಸಲು ಎರಡು ಟ್ರ್ಯೆನಿ ಅನಲಿಸ್ಟ್‍ಗಳನ್ನು ನೇಮಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಟ್ರ್ಯೆನಿ ಅನಲಿಸ್ಟ್ (ಮೈಕ್ರೋ ಬಯಾಲಜಿ) ಅರ್ಹತೆ ಬಿ.ಟೆಕ್/ ಬಿ.ಎಸ್.ಸಿ ಡಯರಿ ಸಯನ್ಸ್ ನಲ್ಲಿ ಪದವಿ ಅಥವಾ ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಟ್ರೈನಿ ಅನಲಿಸ್ಟ್ (ಕೆಮಿಸ್ಟ್ರಿ) ಅರ್ಹತೆ ಬಿ.ಟೆಕ್/ ಬಿ.ಎಸ್.ಸಿ ಡಯರಿ ಸಯನ್ಸ್ ನಲ್ಲಿ ಪದವಿ ಅಥವಾ ಕೆಮಿಸ್ಟ್ರಿಯಲ್ಲಿ, ಬಯೋಕೆಮಿಸ್ಟ್ರಿಯಲ್ಲಿ ಇಂಡಸ್ಟ್ರಿ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ. ವಯಸ್ಸಿನ ಮಿತಿ 18 ರಿಂದ 40 ವರ್ಷ. ಒಂದು ವರ್ಷದ ಕೆಲಸದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಪ್ರಮಾಣಪತ್ರ, ಗುರುತಿನ ಚೀಟಿಗಳ ಪ್ರತಿ ಸಹಿತ ಅರ್ಜಿ, ಬಯೋಡಾಟದೊಂದಿಗೆ ಸೆಪ್ಟೆಂಬರ್ 20 ರಂದು ಸಂಜೆ 5 ಗಂಟೆಯೊಳಗೆ ನೇರವಾಗಿ ಅಥವಾ ಅಂಚೆ ಮೂಲಕ ಡೆಪ್ಯುಟಿ ಡೈರೆಕ್ಟರ್, ರೀಜಿಯನಲ್ ಡೈರಿ ಲಬೋರೇಟರಿ, ಹೈನುಗಾರಿಕೆ ಅಭಿವೃದ್ಧಿ ಇಲಾಖೆ ನಾಯ್ಕಾಪು, ಕುಂಬಳೆ, ಕಾಸರಗೋಡು-671321 ಎಂಬ ವಿಳಾಸಕ್ಕೆ ಕಳುಹಿಸಬೇಕು. ಸಂದರ್ಶನಕ್ಕೆ ಅರ್ಹತೆ ಪಡೆದವರ ಪಟ್ಟಿ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 11 ಗಂಟೆಗೆ ನೋಟಿಸ್ ಬೋರ್ಡ್ ನಲ್ಲಿ ಪ್ರಕಟಿಸಲಾಗುವುದು. ಸಂದರ್ಶನ ಸೆಪ್ಟೆಂಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಕುಂಬಳೆ ನಾಯ್ಕಾಪಿನ ರೀಜನಲ್ ಲಬೋರೇಟರಿ ಡೈರೆಕ್ಟರ್ ರವರ ಕಛೇರಿಯಲ್ಲಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿರುವನಂತÀಪುರದ ಸ್ಟೇಟ್ ಲೆಬೋರೇಟರಿಯಲ್ಲಿ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ 04998 290626 ಸಂಪರ್ಕಿಸಬಹುದು.