ತಿರುವನಂತಪುರಂ: ಅನಗತ್ಯ ರಾಜಕೀಯ ಹಸ್ತಕ್ಷೇಪದಿಂದ ಕೇರಳದ ಪಾರಂಪರಿಕ ಕೃಷಿ ವ್ಯವಸ್ಥೆ-ಸಂಸ್ಕøತಿ ಹಾಳಾಗಿದೆ ಎಂದು ಆರ್‍ಎಸ್‍ಎಸ್ ಪ್ರಾಂತಪ್ರಚಾರ್ ಎಸ್ ಸುದರ್ಶನ್ ತಿಳಿಸಿದ್ದಾರೆ.
ಡಿಸೆಂಬರ್. 15ರಂದು ಕೈತಮುಕ್ ಅನಂತಪುರಂ ಬ್ಯಾಂಕ್ ಸಭಾಂಗಣದಲ್ಲಿ ಭಾರತೀಯ ಕಿಸಾನ್ ಸಂಘ ಆಯೋಜಿಸಲಿರುವ ರ್ಯಾಲಿ ಸಂಬಂಧಿ ಸಂಘಟನಾ ಸಮಿತಿಯ ರಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಗ್ರಾಮ ಕೇಂದ್ರಿತ ಕೃಷಿ ಜೀವನಶೈಲಿಯಲ್ಲಿ ಬೇರೂರಿದೆ. ನಮ್ಮ ಹಬ್ಬ ಹರಿದಿನಗಳೆಲ್ಲ ಕೃಷಿಗೆ ಸಂಬಂಧಿಸಿದ್ದು. ನಮ್ಮ ಕಲೆ ಮತ್ತು ಸಾಹಿತ್ಯದಲ್ಲಿ ಕೃಷಿ ಸಂಸ್ಕøತಿಯೊಂದೇ ಬಿಂಬಿಸಲ್ಪಟ್ಟಿದೆ. ಆದರೆ ಅನಗತ್ಯ ರಾಜಕೀಯ ಹಸ್ತಕ್ಷೇಪ ಕೇರಳದ ಕೃಷಿ ಸಂಸ್ಕೃತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದ ಕೇರಳದ ಕೃಷಿ ಸಂಸ್ಕೃತಿಯನ್ನು ಚೇತರಿಸಿಕೊಳ್ಳಲು ಭಾರತೀಯ ಕಿಸಾನ್ ಸಂಘದ ಚಟುವಟಿಕೆಗಳಿಂದ ಸಾಧ್ಯ ಎಂದರು.
ಹೊಸ ಪೀಳಿಗೆಯಲ್ಲಿ ಕೃಷಿಗೆ ಸಂಬಂಧಿಸಿದ ಆಚಾರ-ವಿಚಾರಗಳು ದೂರವಾದವು. ಇವುಗಳಿಗೆ ಪುನಶ್ಚೇತನ ನೀಡಬೇಕು. ಸಹಕಾರಿ ಕೃಷಿ ಮತ್ತು ಅಡುಗೆ ತೋಟಗಳ ರಚನೆಗೆ ಉತ್ತೇಜನ ನೀಡಬೇಕು. ದೇಶವಿರೋಧಿ ಚಟುವಟಿಕೆಗಳನ್ನು ಮಾಡುವವರು ರೈತರನ್ನು ದಾರಿ ತಪ್ಪಿಸಿ ಗಲಭೆ ಎಬ್ಬಿಸುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಒದಗಿಸಿರುವ ಹಲವು ಸವಲತ್ತುಗಳನ್ನು ಜನರಿಗೆ ತಲುಪಿಸಬೇಕು. ಭಾರತದ ಕೃಷಿ ಚಿಲುಮೆಯ ಗಾಳಿ ಕೇರಳವನ್ನೂ ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಡಾ. ಅನಿಲ್ ವೈದ್ಯಮಂಗಲಂ ಅಧ್ಯಕ್ಷತೆ ವಹಿಸಿದ್ದರು. ಕೇರಳದ ಕೃಷಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಸಾಂಸ್ಥಿಕ, ಸೃಜನಶೀಲ ಮತ್ತು ಉಗ್ರಗಾಮಿ ಮಾರ್ಗಗಳ ಮೂಲಕ ಚಟುವಟಿಕೆಗಳನ್ನು ಹರಡಲಾಗುವುದು ಎಂದು ಅನಿಲ್ ವೈದ್ಯಮಂಗಲಂ ಹೇಳಿದರು.
ಸಂಘಟನಾ ಸಮಿತಿಯ ಪದಾಧಿಕಾರಿಗಳು ಇಸ್ರೋ ಮಾಜಿ ಅಧ್ಯಕ್ಷ ಡಾ. ಜಿ. ಮಾಧವನ್ ನಾಯರ್, ಪಂಕಜಕಸ್ತೂರಿ ಎಂ.ಡಿ. ಡಾ. ಹರೀಂದ್ರನ್ ನಾಯರ್, ಸಾಂಪ್ರದಾಯಿಕ ಭತ್ತದ ರೈತ ಚೆರುವಾಯಲ್ ರಾಮನ್, ಚಲನಚಿತ್ರ ನಿರ್ದೇಶಕ ವಿಜಯ್ ತಂಬಿ, ನಬಾರ್ಡ್ ವಲಯ ಡಿಜಿಎಂ ಡಾ. ಭಾಸ್ಕರನ್, ನಂದಕುಮಾರ್ (ಚೇಂಬರ್ ಆಫ್ ಕಾಮರ್ಸ್) ಉಪಸ್ಥಿತರಿದ್ದು ಮಾತನಾಡಿದರು.
ಶಾಜಿ ಎಸ್. ನಾಯರ್, ಪ್ರೊ. ಲೀಲಮ್ಮ, ಕೆ. ಕೃಷ್ಣನ್‍ಕುಟ್ಟಿ (ರಾಜ್ಯ ಗೋಸೇವಾ ಸಂಚಾಲಕ), ನಾರಾಯಣನ್ (ರಾಜ್ಯ ಪರ್ಯಾಯ ಸಂಚಾಲಕ), ಪಿ. ಸಶೀಂದ್ರನ್ (ಗ್ರಾಮ ವಿಕಾಸ ಪ್ರಾದೇಶಿಕ ಸಂಯೋಜಕರು), ಕಸ್ತೂರಿ, ಎಂ. ಗೋಪಾಲ್, ಅಡ್ವ. ರತೀಶ್ ಗೋಪಾಲನ್ ಉಪಾಧ್ಯಕ್ಷರು. ಪ್ರಧಾನ ಸಂಚಾಲಕ ಅಡ್ವ. ಕೆ. ಮೋಹನ್ ಕುಮಾರ್. ವಿವಿಧ ಜಿಲ್ಲೆಗಳಿಂದ 101 ಸದಸ್ಯರ ಸಂಘಟನಾ ಸಮಿತಿಯನ್ನೂ ರಚಿಸಲಾಗಿದೆ.
ಭಾರತೀಯ ಕಿಸಾನ್ ಸಂಘವು ಕೈತಮುಕ್ ಅನಂತಪುರಂ ಬ್ಯಾಂಕ್ ಸಭಾಂಗಣದಲ್ಲಿ ರೈತರ ಹಕ್ಕುಗಳ ಘೋಷಣೆ ರ್ಯಾಲಿ ಸಂಘಟನಾ ಸಮಿತಿ ಸಭೆಯನ್ನು ಆರ್‍ಎಸ್‍ಎಸ್ ಪ್ರಾಂಚಾಚಾರ್ ಎಸ್. ಸುದರ್ಶನ್ ಉದ್ಘಾಟಿಸಲಿದ್ದಾರೆ. ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಇ. ನಾರಾಯಣನ್‍ಕುಟ್ಟಿ, ಅಧ್ಯಕ್ಷ ಅನಿಲ್ ವೈದ್ಯಮಂಗಲಂ ಮೊದಲಾದವರು ನೇತೃತ್ವ ವಹಿಸುವರು.