ನವದೆಹಲಿ: ನಾಳೆಯಿಂದ ಐದು ದಿನ ಸಂಸತ್ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನದ ಅಧಿವೇಶನ ಹಳೆಯ ಸಂಸತ್ ಕಟ್ಟಡದಲ್ಲಿಯೇ ನಡೆಯಲಿದೆ. ಸೆಪ್ಟೆಂಬರ್ 19 ರಂದು ಹೊಸ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಸರ್ವ ಪಕ್ಷ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 20 ರಿಂದ ನೂತನ ಸಂಸತ್ ಭವನದಲ್ಲಿ ನಿಯಮಿತ ಸರ್ಕಾರಿ ಕೆಲಸಗಳು ಆರಂಭವಾಗಲಿವೆ ಎಂದರು.
ಸಂಸತ್ ವಿಶೇಷ ಅಧಿವೇಶನದ ಮೊದಲ ದಿನದ ಅಧಿವೇಶನ ನಾಳೆ ಹಳೆಯ ಸಂಸತ್ ಕಟ್ಟಡದಲ್ಲಿಯೇ ನಡೆಯಲಿದೆ. ಸೆಪ್ಟೆಂಬರ್ 19 ರಂದು ಹಳೆಯ ಸಂಸತ್ ಕಟ್ಟಡದಲ್ಲಿ ಫೋಟೋ ಸೆಷನ್ಸ್ ಇರಲಿದೆ. ನಂತರ ಅಂದು ಬೆಳಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ಕಾರ್ಯಕ್ರಮವಿರಲಿದೆ. ಬಳಿಕ ನಾವು ಹೊಸ ಸಂಸತ್ ಕಟ್ಟಡ ಪ್ರವೇಶಿಸುವುದಾಗಿ ಪ್ರಹ್ಲಾದ್ ಜೋಷಿ ವಿವರಿಸಿದರು.