ಕಾಸರಗೋಡು : ಶ್ರೀ ನಾರಾಯಣ ಧರ್ಮ ಪರಿಪಾಲನಂ(ಎಸ್‍ಎನ್‍ಡಿಪಿ) ಕಾಸರಗೋಡು ಒಕ್ಕೂಟದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಧಿ ದಿನವನ್ನು ಕಾಸರಗೋಡಿನಲ್ಲಿ ಆಚರಿಸಲಾಯಿತು. ಎಸ್‍ಎನ್‍ಡಿಪಿ ಸಂಚಾಲಕ ವಕೀಲ ಪಿ.ಕೆ.ವಿಜಯನ್ ಶ್ರೀನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಸಮಾರಂಭ ಉದ್ಘಾಟಿಸಿದರು.
ಒಕ್ಕೂಟದ ಕಾರ್ಯದರ್ಶಿ ಗಣೇಶ್ ಪಾರೆಕಟ್ಟ, ಉಪಾಧ್ಯಕ್ಷ ಎ.ಟಿ.ವಿಜಯನ್, ಪಂಚಾಯಿತಿ ಸಮಿತಿ ಸದಸ್ಯ ಮೋಹನನ್ ಮೀಪುಗುರಿ, ವಿ.ಕೆ.ರಾಜೇಶ್, ವಿಜಯನ್ ಮಾಣಿಪ್ಪಾಡಿ, ಕೃಷ್ಣನ್, ಜನಾರ್ದನನ್ ಮೀಪುಗುರಿ ಉಪಸ್ಥಿತರಿದ್ದರು.