ಕೊಟ್ಟಾಯಂ: ಉಪಚುನಾವಣೆ ಘೋಷಣೆಯಾದಾಗಿನಿಂದಲೂ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದಿದ್ದ ಪುದುಪಳ್ಳಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಚಾಂಡಿ ಉಮ್ಮನ್ 37719 ಮತಗಳ ಬಹುಮತದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ಉಮ್ಮನ್ ಚಾಂಡಿ ಅವರ ಮರಣದ ಬಳಿಕ ತೆರವಾದ ಸ್ಥಾನಕ್ಕೆ ಮೊನ್ನೆ ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ಇಂದು ನಡೆದಿತ್ತು. ಅನುಕಂಪದ ಅಲೆ ಮತ್ತು ಆಡಳಿತ ವಿರೋಧಿ ಭಾವನೆಯಿಂದಾಗಿ ಚಾಂಡಿ ಉಮ್ಮನ್ ಅವರ ಗೆಲುವಿಗೆ ಕಾರಣವಾಯಿತು. ಕ್ಷೇತ್ರದ ಇತಿಹಾಸದಲ್ಲೇ ಅತ್ಯಧಿಕ ಬಹುಮತವನ್ನು ಯುಡಿಎಫ್ ಬಾಚಿಕೊಂಡಿದೆ.
ಯುಡಿಎಫ್ ಕಳೆದ ಬಾರಿಗಿಂತ 14,726 ಹೆಚ್ಚು ಮತಗಳನ್ನು ಪಡೆದಿದೆ. ಎಲ್ ಡಿಎಫ್ 12,684 ಮತಗಳನ್ನು ಕಳೆದುಕೊಂಡಿದೆ. ಬಿಜೆಪಿ ಅಭ್ಯರ್ಥಿ ಲಿಜಿನಲಾಲ್ 6447 ಮತಗಳನ್ನು ಪಡೆದಿದ್ದಾರೆ.
ಉಮ್ಮನ್ ಚಾಂಡಿ 53 ವರ್ಷಗಳ ಕಾಲ ಪುದುಪಳ್ಳಿ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರು. 2011ರ ಚುನಾವಣೆಯಲ್ಲಿ ಸಿಪಿಎಂನ ಸುಜಾ ಸುಸಾನ್ ಜಾರ್ಜ್ ವಿರುದ್ಧ 33,255 ಮತಗಳನ್ನು ಗಳಿಸಿದ್ದು ಉಮ್ಮನ್ ಚಾಂಡಿ ಅವರ ಗರಿಷ್ಠ ಬಹುಮತ ಅಲ್ಪ ಕುಸಿದಿತ್ತು. 2021ರಲ್ಲಿ ಜೇಕ್ ಪಿ ಥಾಮಸ್ ವಿರುದ್ಧ ಉಮ್ಮನ್ ಚಾಂಡಿ 9044 ಮತಗಳ ಬಹುಮತ ಗಳಿಸಿದ್ದರು.
ಈ ಬಾರಿ ಮತ ಎಣಿಕೆ ಆರಂಭದಿಂದಲೂ ಚಾಂಡಿ ಉಮ್ಮನ್ ಮುನ್ನಡೆಯಲ್ಲಿದ್ದರು. ಒಮ್ಮೆಯೂ ಚಾಂಡಿ ಉಮ್ಮನ್ ಹಿಂದೆ ಬಿದ್ದಿರಲಿಲ್ಲ.