HEALTH TIPS

ಭಾರತ-ಕೆನಡಾ ರಾಜತಾಂತ್ರಿಕ ಸಂಬಂಧ ಉದ್ವಿಗ್ನ: ವ್ಯಾಪಾರ, ಹೂಡಿಕೆ ಮೇಲೆ ಪರಿಣಾಮ ಬೀರಲ್ಲ- ತಜ್ಞರು

     ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಉದ್ವಿಗ್ನಗೊಂಡಿದ್ದು, ಇದು ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಏಕೆಂದರೆ ಆರ್ಥಿಕ ಸಂಬಂಧಗಳು ವಾಣಿಜ್ಯ ಪರಿಗಣನೆಗಳಿಂದ ನಡೆಸಲ್ಪಡುತ್ತವೆ ಎಂದು ತಜ್ಞರು ಹೇಳಿದ್ದಾರೆ.

      ಭಾರತ ಮತ್ತು ಕೆನಡಾ ಎರಡೂ ಪೂರಕ ಉತ್ಪನ್ನಗಳ ವ್ಯಾಪಾರ ನಡೆಸುತ್ತಿವೆ ಮತ್ತು ಒಂದೇ ರೀತಿಯ ಉತ್ಪನ್ನಗಳೊಂದಿಗೆ ಸ್ಪರ್ಧಿಸುವುದಿಲ್ಲ.

      "ಆದ್ದರಿಂದ, ವ್ಯಾಪಾರ ಸಂಬಂಧವು ಬೆಳೆಯುತ್ತಲೇ ಇರುತ್ತದೆ ಮತ್ತು ಅದರ ಮೇಲೆ ದಿನನಿತ್ಯದ ಘಟನೆಗಳಿಂದ ಯಾವುದೇ ಪರಿಣಾವ ಬೀರುವುದಿಲ್ಲ" ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್ಐ) ಸಹ-ಸಂಸ್ಥಾಪಕ ಅಜಯ್ ಶ್ರೀವಾಸ್ತವ ಅವರು ಹೇಳಿದ್ದಾರೆ.

      ಕೆಲವು ರಾಜಕೀಯ ಬೆಳವಣಿಗೆಗಳು ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗೆ ಬ್ರೇಕ್ ಹಾಕಲು ಕಾರಣವಾಗಿವೆ.

       ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದರು. ಈ ಮಾತುಕತೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧ ಹಳಸಿದೆ.

      ಸಂಬಂದ ಹಳಸಿದ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕರಿಸಿದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ 5 ದಿನಗಳ ಒಳಗಡೆ ದೇಶ ತೊರೆಯುವಂತೆ ಕೆನಡಾ ರಾಯಭಾರಿಗೆ ಭಾರತ ಸೂಚಿಸಿದೆ.

      ಇತ್ತೀಚಿನ ಘಟನೆಗಳು ಉಭಯ ರಾಷ್ಟ್ರಗಳ ನಡುವೆ ಆಳವಾಗಿ ಬೇರೂರಿರುವ ಜನರ ಸಂಪರ್ಕ, ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶ್ರೀವಾಸ್ತವ ಹೇಳಿದ್ದಾರೆ.

      ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ವ್ಯಾಪಾರವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಬೆಳೆದಿದೆ, ಉಭಯ ದೇಶಗಳ ನಡುವಿನ ವ್ಯಾಪರ 2022-23 ರಲ್ಲಿ USD 8.16 ಬಿಲಿಯನ್ ತಲುಪಿದೆ.

      ಭಾರತ ಮತ್ತು ಕೆನಡಾ ನಡುವಿನ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯೂ ಖಂಡಿತವಾಗಿಯೂ ಕಳವಳಕ್ಕೆ ಕಾರಣವಾಗಿದೆ ಎಂದು ಮುಂಬೈ ಮೂಲದ ರಫ್ತುದಾರ ಮತ್ತು ಟೆಕ್ನೋಕ್ರಾಫ್ಟ್ ಇಂಡಸ್ಟ್ರೀಸ್ ಅಧ್ಯಕ್ಷ ಶರದ್ ಕುಮಾರ್ ಸರಾಫ್ ಅವರು ಹೇಳಿದ್ದಾರೆ.

     "ಆದಾಗ್ಯೂ, ದ್ವಿಪಕ್ಷೀಯ ವ್ಯಾಪಾರ ಸಂಪೂರ್ಣವಾಗಿ ವಾಣಿಜ್ಯ ಪರಿಗಣನೆಯಿಂದ ನಡೆಯುತ್ತದೆ. ರಾಜಕೀಯ ಪ್ರಕ್ಷುಬ್ಧತೆಯು ತಾತ್ಕಾಲಿಕ ಸ್ವಭಾವವಾಗಿದೆ ಮತ್ತು ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರಲು ಕಾರಣವಾಗಬಾರದು" ಎಂದು ಸರಾಫ್ ಹೇಳಿದ್ದಾರೆ.

     ಚೀನಾದೊಂದಿಗೆ ಭಾರತ ಉತ್ತಮವಾದ ದ್ವಿಪಕ್ಷೀಯ ಸಂಬಂಧ ಹೊಂದಿಲ್ಲ. ಆದರೆ ದ್ವಿಪಕ್ಷೀಯ ವ್ಯಾಪಾರವು ಆರೋಗ್ಯಕರವಾಗಿ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries