ಬದಿಯಡ್ಕ: ಭಾರತೀಯ ಜನತಾ ಯುವ ಮೋರ್ಚಾ ಪಂಚಾಯಿತಿ ಸಮಾವೇಶ ಮವ್ವಾರು ಪಕ್ಷದ ಕಾರ್ಯಾಲಯದಲ್ಲಿ ಜರಗಿತು. ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರಪುಲ್ ಕೃಷ್ಣ ಉದ್ಘಾಟಿಸಿ ಮಾತಾಡಿ, ಇಂದಿನ ರಾಜಕೀಯ ವಿದ್ಯಾಮಾನಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಯುವಕರು ಬೂತು ಮಟ್ಟದಲ್ಲಿ ಇಳಿದು ಸದಸ್ಯತನ ಶಿಬಿರ ಯಶಸ್ವಿಗೊಳಿಸಿ ಬಿಜೆಪಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಸಿದ್ದರಾಗಬೇಕೆಂದು ಕರೆಯಿತ್ತರು.
ಯುವಮೋರ್ಚಾ ಪಂಚಾಯಿತಿ ಸಮಿತಿ ಅಧ್ಯಕ್ಷ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಬಿಜೆಪಿ ಬದಿಯಡ್ಕ ಮಂಡಲಾಧ್ಯಕ್ಷ ಹರೀಶ್ ನಾರಂಪಾಡಿ, ಬಿಜೆಪಿ ಮಂಡಲ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಕುಂಬ್ಡಾಜೆ ಬಿಜೆಪಿ ಅಧ್ಯಕ್ಷ ಹರೀಶ್ ಗೋಸಾಡ, ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಶಶಿಧರ್ ತೆಕ್ಕೆಮೂಲೆ, ಯುವಮೋರ್ಚಾ ಮಂಡಲ ಉಪಾಧ್ಯಕ್ಷ ಅಂಬುಜಾಕ್ಷಾ ನಡುಮೂಲೆ, ಸುರೇಶ್ ಬಿಕೆ, ರಘು ಮಾಚವು ಉಪಸ್ಥಿತರಿದ್ದರು, ಗಣೇಶ್ ಪೈ ಕೆ ಸ್ವಾಗತಿಸಿ, ಸುದೀಪ್ ಪಡೀಕ್ಕಲ್ ವಂದಿಸಿದರು.