ಕುಂಬಳೆ: ನಾಡಿನಾದ್ಯಂತ ಕೆಥೋಲಿಕ ಕ್ರೈಸ್ತರು ಶುಕ್ರವಾರ ತೆನೆ ಹಬ್ಬ(ಮೊಂತಿಫೆಸ್ತ್) ಆಚರಿಸಿದರು.
ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಶುಕ್ರವಾರ ತೆನೆ ಹಬ್ಬ(ಮೊಂತಿ ಫೆಸ್ತ್) ಆಚರಿಸಲಾಯಿತು. ಬಾಲೆ ಮರಿಯಮ್ಮಳಿಗೆ ಹೂವುಗಳನ್ನು ಅರ್ಪಿಸಿ, ಸ್ತುತಿಗೀತೆಗಳನ್ನು ಹಾಡಿ ನಮಿಸಲಾಯಿತು. ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ತೆನೆಗಳ ಆಶೀರ್ವಚನ ನಡೆಸಿದರು. ಸಹಾಯಕ ಧರ್ಮಗುರು ಫಾ. ಕ್ಲೌಡ್ ಕ್ರೋಡಾ, ಫಾ. ಪ್ರಸಾದ್ ಜೋರ್ಜ್ ಉಪಸ್ಥಿತರಿದ್ದರು. ಬಳಿಕ ಮಾತೆಯ ನಾಮಕ್ಕೆ ಸ್ತುತಿಗೀತೆಗಳನ್ನು ಹಾಡುತ್ತಾ ಆಶೀರ್ವದಿತ ತೆನೆಗಳೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಪ್ರವೇಶಿಸಲಾಯಿತು. ಬಳಿಕ ದಿವ್ಯಬಲಿಪೂಜೆ, ಕಬ್ಬು ವಿತರಣೆ ನಡೆಯಿತು.