ಕೋಲ್ಕತ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಈಗ ಕೈಗಾರಿಕೋದ್ಯಮಿಯಾಗುತ್ತಿದ್ದು, ಸದ್ಯದಲ್ಲೇ ಪಶ್ಚಿಮ ಮೆದಿನಿಪುರ್ನ ಸಲ್ಬೊನಿಯಲ್ಲಿ ಸ್ಟೀಲ್ ಫ್ಯಾಕ್ಟರಿ ಆರಂಭಿಸಲಿದ್ದಾರೆ.
ಕೋಲ್ಕತ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಈಗ ಕೈಗಾರಿಕೋದ್ಯಮಿಯಾಗುತ್ತಿದ್ದು, ಸದ್ಯದಲ್ಲೇ ಪಶ್ಚಿಮ ಮೆದಿನಿಪುರ್ನ ಸಲ್ಬೊನಿಯಲ್ಲಿ ಸ್ಟೀಲ್ ಫ್ಯಾಕ್ಟರಿ ಆರಂಭಿಸಲಿದ್ದಾರೆ.
ಸ್ಟೀಲ್ ಫ್ಯಾಕ್ಟರಿ ಆರಂಭಿಸಲು ಅವಕಾಶ ನೀಡಿರುವ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಸಲ್ಲಿಸಿರುವ ಗಂಗೂಲಿ, ಐದಾರು ತಿಂಗಳಲ್ಲಿ ಕಾರ್ಖಾನೆ ಆರಂಭವಾಗಲಿದ್ದು, ಇದು ಬಂಗಾಳದ ಮೂರನೇ ಸ್ಟೀಲ್ ಕಾರ್ಖಾನೆಯಾಗಲಿದೆ ಎಂದಿದ್ದಾರೆ.
ಸದ್ಯ ಗಂಗೂಲಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ 12 ದಿನಗಳ ಸ್ಪೇನ್ ಮತ್ತು ದುಬೈ ಪ್ರವಾಸದಲ್ಲಿದ್ದಾರೆ.
ಸ್ಪೇನ್ನ ಮ್ಯಾಡ್ರಿಡ್ನಲ್ಲಿ ಇತ್ತೀಚೆಗೆ ನಡೆದ ಬ್ಯಾಂಗಲ್ ಗ್ಲೋಬಲ್ ಬಿಸಿನೆಸ್ ಸಮ್ಮಿತ್ (ಬಿಜಿಬಿಎಸ್)ನಲ್ಲಿ ಮಾತನಾಡಿದ ಅವರು, 'ಕ್ರೀಡೆಯಲ್ಲಿ ಸಾಕಷ್ಟು ನಂಬಿಕೆ ಇಟ್ಟಿರುವ ನಾನು, 2007ರಲ್ಲಿ ಸಣ್ಣ ಪ್ರಮಾಣದ ಸ್ಟೀಲ್ ಕಾರ್ಖಾನೆ ಆರಂಭಿಸಿದ್ದೆ. ಐದಾರು ತಿಂಗಳಲ್ಲಿ ದೊಡ್ಡ ಮಟ್ಟದ ಸ್ಟೀಲ್ ಕಾರ್ಖಾನೆ ಆರಂಭಿಸುತ್ತೇನೆ' ಎಂದರು.
ಅಂದಾಜು 50-55 ವರ್ಷಗಳ ಹಿಂದೆಯೇ ತಮ್ಮ ತಾತ ಬಿಸಿನೆಸ್ ಆರಂಭಿಸಿದ್ದರು. ಅವತ್ತಿಗಿಂತ ಇಂದಿನ ಸರ್ಕಾರ ಉದ್ಯಮಿಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿದೆ. ಪ್ರಪಂಚದಾದ್ಯಂತ ಉದ್ಯಮಿಗಳು ಬಂಗಳಾದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದಾರೆ ಎಂದು ಗಂಗೂಲಿ ಹೇಳಿದರು.