ಬದಿಯಡ್ಕ: ಅಟೋರಿಕ್ಷಾ ಹಾಗೂ ಶಾಲಾ ಬಸ್ ಪರಸ್ಪರ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸ್ತ್ರೀಗಳ ಸಹಿತ ಐವರು ದಾರುಣವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಸಂಜೆ ಬದಿಯಡ್ಕ ಪರಿಸರದ ಪಳ್ಳÀತ್ತಡ್ಕದಲ್ಲಿ ನಡೆದಿದೆ.
ಮೂಲತಃ ತಾಯಲಂಗಾಡಿ ನಿವಾಸಿಗಳೂ, ಪ್ರಸ್ತುತ ಮೊಗ್ರಾಲ್ ಪುತ್ತೂರು ಮೊಗರು ಎಂಬಲ್ಲಿ ವಾಸಿಸುತ್ತಿರುವ ಎ.ಎಚ್.ಅಬ್ದುಲ್ ರೌಫ್(58), ಶೇಖ್ ಆಲಿ ಎಂಬವರ ಪತ್ನಿ ಬೀಪಾತಿಮ್ಮ (60), ಸಹೋದರಿಯರಾದ ಮೊಗರು ನಿವಾಸಿಗಳಾದ ಹುಸೈನ್ ಎಂಬವರ ಪತ್ನಿ ಬೀಪಾತಿಮ್ಮ(50), ಇಸ್ಮಾಯಿಲ್ ಎಂಬವರ ಪತ್ನಿ ಉಮ್ಮು ಹಲೀಮ, ಬೆಳ್ಳೂರಿನ ಅಬ್ಜಾಸ್ ಎಂಬವರ ಪತ್ನಿ ನಫೀಸ ಮೃತಪಟ್ಟವರು.
ಮಾನ್ಯ ಗ್ಲೋಬಲ್ ಶಾಲೆಯ ಬಸ್ ಮಕ್ಕಳನ್ನು ಪೆರ್ಲಕ್ಕೆ ತಲಪಿಸಿ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮೊಗ್ರಾಲ್ ಪುತ್ತೂರಿನಿಂದ ಪೆರ್ಲಕ್ಕೆ ಮರಣ ನಡೆದ ಮನೆಯೊಂದಕ್ಕೆ ಅಟ|ಓದಲ್ಲಿ ತೆರಳುತ್ತಿದ್ದು ಪರಸ್ಪರ ಡಿಕ್ಕಿಯಾ|ಗಿ ಈ ಅಪಘಾತ ನಡೆದಿದೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.