ಪೆರ್ಲ : ಶುದ್ಧ ಕುಡಿಯುವ ನೀರಿನ ಮಹತ್ವದ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಬೋಧನೆ ನಡೆಸುವ ಮೂಲಕ ಭವಿಷ್ಯದಲ್ಲಿ ನೀರಿನ ಮಿತ ಬಳಕೆ ಬಗ್ಗೆ ಅಭಿಯಾನ ನಡೆಸುವುದು ಅನಿವಾರ್ಯ ಎಂಬುದಾಗಿ ಬ್ಯಾಂಕ್‍ನ ನಿವೃತ್ತ ಅಧಿಕಾರಿ, ಪುಂಡಿಕಾಯಿ ನಾರಾಯಣ ಭಟ್ ತಿಳಿಸಿದ್ದಾರೆ. ಅವರು ಪೆರ್ಲ ಶ್ರೀ ಸತ್ಯನಾರಾಯಣ ವಿದ್ಯಾ ಸಂಸ್ಥೆಗಾಗಿ ದಾನಿಗಳ ನೆರವಿನಿಂದ ನಿರ್ಮಿಸಲಾದ 35ಸಾವಿರ ಲೀ. ಸಾಮಥ್ರ್ಯದ ನೀರಿನ ಓವರ್‍ಹೆಡ್ ಟ್ಯಾಂಕ್‍ನ ಉದ್ಘಾಟನೆ ನೆರವೇರಿಸಿ ಶಾಲಾ ಕಲಾನಿಲಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಯುಎಇ ಮನಿ ಎಕ್ಸ್‍ಚೇಂಜ್‍ನ ನಿವೃತ್ತ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಸಂಸ್ಕøತಿಯನ್ನು ಬಿಟ್ಟು ನಾಡಿಗೆ ಭವಿಷ್ಯವಿಲ್ಲ. ಭವಿಷ್ಯದಲ್ಲಿ ನೀರಿನ ಬಗ್ಗೆ ಪ್ರತಿಯೊಬ್ಬ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ. ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಗೆ ನೀರಿನ ಅನಿವಾರ್ಯತೆ ಮನಗಂಡು ದಾನಿಗಳ ನೆರವಿನಿಂದ ಕೊಳವೆಬಾವಿ ಹಾಗೂ ಸುಸಜ್ಜಿತ ನೀರಿನ ಟ್ಯಾಂಕ್ ನಿರ್ಮಾಣಗೊಂಡಿರುವುದು ಶ್ಲಾಘನೀಯ. ಒಂದು ಶಾಲೆಯ ಅಭಿವೃದ್ಧಿ ನಾಡಿನ ಉನ್ನತಿಗೆ ಸಮಾನವಾಗಿದೆ. ಇದಕ್ಕಾಗಿ ಶಾಲೆಗಳ ಪುರೋಗತಿಗೆ ಪ್ರತಿಯೊಬ್ಬ ಕೈಜೋಡಿಸುವಂತಾಗಬೇಕು ಎಂದು ತಿಳಿಸಿದರು.
ಶಾಲಾ ನಿವೃv್ತ ಮುಖ್ಯ ಶಿಕ್ಷಕಿ ಪ್ರಭಾವತೀ ಕೆ.ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಜಿ ರಾಮ ಭಟ್, ಶಾಲಾ ಪ್ರಬಂಧಕರ ಪ್ರತಿನಿಧಿಯಾಗಿ ಅವರ ಪುತ್ರ ಡಾ. ಪ್ರಸನ್ನಮಿತ್ರ, ಆಡಳಿತ ಮಂಡಳಿ ಸದಸ್ಯ ಬಿ.ಎಸ್ ಗಾಂಭಿರ್, ಉಪಾಧ್ಯಕ್ಷ ವೆಂಕಟ್ರಾಜ ಮಿತ್ರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಾರಾಮ ಬಾಳಿಗ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ, ಎಂ.ಪಿ.ಟಿ.ಎ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಇಂಜಿನಿಯರ್ ಶ್ರೀನಿವಾಸ ಪೈ ಅಮೆಕ್ಕಳ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಬಿ. ರಾಜೇಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಇಯರಿಂದ ಪ್ರಾರ್ಥನೆ ನಡೆಯಿತು. ಪ್ರಭಾರ ಮುಖ್ಯ ಶಿಕ್ಷಕ ಎನ್. ಕೇಶವ ಪ್ರಕಾಶ್ ಲೆಕ್ಕಪತ್ರ ಮಂಡಿಸಿದರು. ಡಾ. ಸತೀಶ್ ಪುಣಿಂಚಿತ್ತಾಯ ಮತ್ತು ಉದಯಶಂಕರ ಭಟ್ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಪ್ರಸಾದ್ ಬಿ. ವಂದಿಸಿದರು.
ಶುಳುವಾಲುಮೂಲೆ ಶಿವಸುಬ್ರಹ್ಮಣ್ಯಭಟ್ ಪೌರೋಹಿತ್ಯದಲ್ಲಿ ಗಣಪತಿ ಹೋಮ ನಡೆಯಿತು. ಶಾಲಾ ಹಿರಿಯ ವಿದ್ಯಾರ್ಥಿಗಳು, ಪೆರ್ಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ವಿದ್ಯಾ ಪ್ರೇಮಿಗಳ ಕೊಡುಗೆಯನ್ವಯ ಸುಮಾರು 12ಲಕ್ಷ ರೂ. ವೆಚ್ಚದಲ್ಲಿ ನೀರಿನ ಟ್ಯಾಂಕ್ ಹಾಗೂ ಪೈಪ್‍ಲೈನ್ ನಿರ್ಮಾಣಕಾರ್ಯ ನಡೆಸಲಾಗಿದೆ.