ಕಾಸರಗೋಡು: ಕುತ್ತಿಕ್ಕೋಲ್ ಶ್ರೀ ಮಹಾವಿಷ್ಣು ದೇವಸ್ಥಾನ ವಠಾರದಲ್ಲಿ ಶ್ರೀಕೃಷ್ಣ ಜಯಂತಿ ಅಂಗವಾಗಿ ಅಳವಡಿಸಲಾಗಿದ್ದ ಧ್ವಜ, ತೋರಣಗಳನ್ನು ಕಿಡಿಗೇಡಿಗಳ ತಂಡವೊಂದು ನಾಶಗೊಳಿಸಿದೆ.
ಬೈಕ್‍ಗಳಲ್ಲಿ ಆಗಮಿಸಿದ ತಂಡ ಕೃತ್ಯವೆಸಗಿದ್ದು, ಪ್ರಕರಣಕ್ಕೆ ಸಂಬಂಧಿಸಿ 15ಮಂದಿ ವಿರುದ್ಧ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದು, ಹೊಸದಾಗಿ ಧ್ವಜ, ತೋರಣ ಅಳವಡಿಸಿದ್ದಾರೆ. ಬಿಗುವಿನ ಪರಿಸ್ಥಿತಿ ಮುಂದುವರಿದಿದ್ದು, ಸ್ಥಳದಲ್ಲಿ ಪೊಲೀಸ್ ಕಾವಲಿನೊಂದಿಗೆ ಕಾರ್ಯಕ್ರಮ ನಡೆಸಲಾಯಿತು.