ಚಂಡೀಗಢ: ಕಾಂಗ್ರೆಸ್ ಶಾಸಕ ಸುಕ್ಪಾಲ್ ಸಿಂಗ್ ಖೈರಾ ಅವರನ್ನು 2015ರ ಮಾದಕ ವಸ್ತು ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ ಎಂದು ಅವರ ಕುಟುಂಬ ವರ್ಗ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಚಂಡೀಗಢ: ಕಾಂಗ್ರೆಸ್ ಶಾಸಕ ಸುಕ್ಪಾಲ್ ಸಿಂಗ್ ಖೈರಾ ಅವರನ್ನು 2015ರ ಮಾದಕ ವಸ್ತು ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ ಎಂದು ಅವರ ಕುಟುಂಬ ವರ್ಗ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಅದರೆ, ಖೈರಾ ಅವರನ್ನು ಬಂಧಿಸಿರುವ ಬಗ್ಗೆ ಪಂಜಾಬ್ ಪೊಲೀಸರು ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ.
ಭೋಲತ್ ಕ್ಷೇತ್ರದ ಶಾಸಕರಾದ ಖೈರಾ ನಿವಾಸಕ್ಕೆ ಪೊಲೀಸರು ಆಗಮಿಸಿದ್ದು, ಅವರನ್ನು ಬಂಧಿಸಿದ್ದನ್ನು ತೋರಿಸಲು ಕುಟುಂಬಸ್ಥರು ಫೇಸ್‌ಬುಕ್ ಲೈವ್ ಮಾಡಿದ್ದಾರೆ. ಪೊಲೀಸರೊಂದಿಗೆ ಖೈರಾ ವಾಗ್ವಾದ ನಡೆಸುತ್ತಿರುವುದು, ವಾರಂಟ್ ಪ್ರತಿ ತೋರಿಸುವಂತೆ ಆಗ್ರಹಿಸುತ್ತಿರುವುದು ಫೇಸ್‌ಬುಕ್ ವಿಡಿಯೊದಲ್ಲಿ ದಾಖಲಾಗಿದೆ. ಜತೆಗೆ, ಪೊಲೀಸರ ಗುರುತಿನ ಚೀಟಿಯನ್ನು ಕೇಳುತ್ತಿರುವುದೂ ವಿಡಿಯೊದಲ್ಲಿದೆ.
ಜಲಾಲಬಾದ್‌ನಲ್ಲಿ 2015ರ ಮಾರ್ಚ್‌ನಲ್ಲಿ ದಾಖಲಾಗಿದ್ದ ಮಾದಕ ದ್ರವ್ಯ ಪ್ರಕರಣದಲ್ಲಿ 9 ಮಂದಿ ಆರೋಪಿಗಳನ್ನಾಗಿ ಮಾಡಲಾಗಿತ್ತು. ನಂತರ ಅವರಿಗೆ ಶಿಕ್ಷೆಯೂ ಆಗಿತ್ತು. ಈ ಪ್ರಕರಣದಲ್ಲಿ ಹೆಚ್ಚುವರಿ ಆರೋಪಿಯಾಗಿದ್ದ ಖೈರಾ ವಿರುದ್ಧದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2017ರಲ್ಲಿ ರದ್ದು ಮಾಡಿತ್ತು.