HEALTH TIPS

ಶಿವಾಜಿಯ 'ವಾಘ್ ನಖ್' ಡ್ಯಾಗರ್ ಬ್ರಿಟನ್‌ನಿಂದ ವಾಪಸ್ ತರಲಾಗುವುದು: ಕೇಂದ್ರ

              ನವದೆಹಲಿ: ಮರಾಠ ರಾಜ ಛತ್ರಪತಿ ಶಿವಾಜಿ ಬಳಸಿದ್ದ ಅಪರೂಪದ 'ವಾಘ್ ನಖ್' ಡ್ಯಾಗರ್ ಅನ್ನು ಬ್ರಿಟನ್‌ನಿಂದ ಸ್ವದೇಶಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.


               ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಚಿವಾಲಯವು, 'ನಮ್ಮ ಅಮೂಲ್ಯವಾದ ಕಲಾಕೃತಿಗಳನ್ನು ಸ್ವದೇಶಕ್ಕೆ ವಾಪಸ್ ತರುತ್ತಿರುವುದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಗೆಲುವು' ಎಂದು ಅದು ಹೇಳಿದೆ.

             ಶನಿವಾರ ದೆಹಲಿಯಲ್ಲಿ ಆರಂಭವಾದ ಜಿ 20 ನಾಯಕರ ಶೃಂಗಸಭೆಯ ಸಂದರ್ಭದಲ್ಲೇ ಈ ಘೋಷಣೆ ಆಗಿದೆ.

                 'ನಮ್ಮ ವೈಭವಯುತ ಪರಂಪರೆ ಮರಳುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ 'ವಾಘ್ ನಖ್' ಭಾರತಕ್ಕೆ ಮರಳಲು ಸಜ್ಜಾಗಿದ್ದು, ವಿಜಯೋತ್ಸಾಹ ಮುಂದಾಗಿ'ಎಂದು ಸಚಿವಾಲಯ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

               ಪೋಸ್ಟ್‌ನೊಂದಿಗೆ #CultureUnitesAll ಮತ್ತು #G20India ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದೆ.

                ಸಚಿವಾಲಯವು "India reclaims its history' ಎಂಬ ಅಡಿಬರಹನ್ನು ಹೊಂದಿರುವ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದೆ. 'ವಾಘ್ ನಖ್' ಅನ್ನು ಅಫ್ಜಲ್ ಖಾನ್‌ನನ್ನು ಸೋಲಿಸಲು ಬಳಸಿದ ಅಸ್ತ್ರ' ಎಂದು ಉಲ್ಲೇಖಿಸಲಾಗಿದೆ.

             ವಾಘ್ ನಖ್ ಮೊದಲು ಯಾರ ಬಳಿ ಇತ್ತೆಂಬ ಬಗ್ಗೆ ಬೇರೆ ಬೇರೆ ಉಲ್ಲೇಖಗಳಿವೆ. ವಿಷಪೂರಿತ ವಾಘ್ ನಖ್ ಅನ್ನು ರಜಪೂತರು ಶತ್ರುಗಳ ಹತ್ಯೆಗೆ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಬಿಜಾಪುರದ ಸೇನಾಪತಿ ಅಫ್ಜಲ್ ಖಾನ್‌ನನ್ನು ಕೊಲ್ಲಲು ಬಿಚುವಾ ಮತ್ತು ವಾಘ್ ನಖ್ ಅನ್ನು ಮೊದಲು ಬಳಸಿದ್ದು ಮರಾಠ ನಾಯಕ ಛತ್ರಪತಿ ಶಿವಾಜಿ ಎಂಬ ಉಲ್ಲೇಖಗಳೂ ಇವೆ. ಇದು ನಿಹಾಂಗ್ ಸಿಖ್ಖರ ಜನಪ್ರಿಯ ಆಯುಧವಾಗಿದೆ. ಅಪಾಯಕಾರಿ ಪ್ರದೇಶಗಳಿಗೆ ಒಂಟಿಯಾಗಿ ಹೋಗುವಾಗ ನಿಹಾಂಗ್ ಮಹಿಳೆಯರು ವಾಘ್ ನಖ್ ಅನ್ನು ಒಯ್ಯುತ್ತಿದ್ದರು ಎಂಬ ಮಾತುಗಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries