ಮಂಜೇಶ್ವರ: ಪಂಡಿತ್ ದೀನದಯಾಳ್ ರವರ ಜೀವನ ಶೈಲಿ ಇಂದಿನ ರಾಜಕೀಯ ನೇತಾರರರಿಗೆ ಪ್ರೇರಕ ಶಕ್ತಿಯಾಗಿದೆ. ಅಂದು ಅವರು ಕಂಡ ಕನಸು ಇಂದು ನರೇಂದ್ರಮೋದಿ ನನಸು ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ಹೇಳಿದರು.
ದೀನ್‍ದಯಾಳ್ ಸಂಸ್ಮರಣ ದಿನದ ಅಂಗವಾಗಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ವರ್ಕಾಡಿಯಲ್ಲಿ ಹಮ್ಮಿಕೊಂಡ ಸಂಸ್ಮರಣಾ ಪುಷ್ಪಾರ್ಚನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಮಾತನಾಡಿ ಪಕ್ಷ ಸಂಘಟನೆ ಹಾಗೂ ಕಾರ್ಯಕ್ರಮಗಳ ವಿವರಣೆ ನೀಡಿದರು. ನಂತರ ನಡೆದ ಬಿಜೆಪಿ ಮಂಡಲ ಸಮಿತಿ ಸಭೆಯಲ್ಲಿ ಪಂಚಾಯತಿ ಹಾಗೂ ಬ್ಲಾಕ್, ಜಿಲ್ಲಾ ಮಟ್ಟದ ಕೇರಲೋತ್ಸವ ದಲ್ಲಿ ತುಳುನಾಡಿನ ಸಾಂಸ್ಕøತಿಕ ಕಲೆ ಕುಣಿತ ಭಜನೆಯನ್ನು ಸ್ಪರ್ಧಾ ಕಾರ್ಯಕ್ರಮವಾಗಿ ಸೇರ್ಪಡೆ ಮಾಡಿ ಅವಕಾಶ ನೀಡಬೇಕೆಂದು ಆಗ್ರಹಿಸಲಾಯಿತು.
ಪೋಲೀಸ್ ರಿಗೆ ಹಲ್ಲೆ ನಡೆಸಿ ಜೈಲವಾಸ ಅನುಭವಿಸಿ ಹೊರ ಬಂದ ಮುಸ್ಲಿಂ ಲೀಗ್ ನೇತಾರ ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬಂದಿಗಳಿಗೆ ಹಲ್ಲೆ ಮಾಡಿರುವುದು ಖಂಡನೀಯ. ಮುಸ್ಲಿಂ ಲೀಗ್ ರಾಜಕೀಯ ನೈತಿಕತೆ ಇದ್ದರೆ ಇಂತಹ ಗುಂಡಾ ಗಳನ್ನು ವಜಾ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಹಾಗೂ ಗುಂಡಾಗಳನ್ನು ಸಮರ್ಥಿಸುವ ಮಂಜೇಶ್ವರ ಶಾಸಕರ ಪ್ರವೃತ್ತಿ ನಾಡಿಗೆ ಅವಮಾನ ಎಂದು ಬಿಜೆಪಿ ಅಭಿಪ್ರಾಯ ಪಟ್ಟಿದೆ.
ಕಾರ್ಯಕ್ರಮದಲ್ಲಿ ಬಿಜೆಪಿ ನೇತಾರರಾದ ಮಣಿಕಂಠ ರೈ, ಅಶ್ವಿನಿ ಪಜ್ವ, ಕೆ ವಿ ಭಟ್, ನಾರಾಯಣ ತುಂಗ, ಶಂಕರ ನಾರಾಯಣ ಮುಂದಿಲ ರಕ್ಷನ್ ಅಡಕಳ, ಲೋಕೇಶ್ ನೋಂಡ, ರವಿ ವರ್ಕಾಡಿ, ರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಚಂದ್ರಹಾಸ ಕಡಂಬರ್ ಸ್ವಾಗತಿಸಿ ತುಳಸಿ ಕುಮಾರಿ ವಂದಿಸಿದರು.