ಕುಂಬಳೆ : ಕುಂಬಳೆ ಟಾಣೆ ಎಸ್.ಐ ಕುಟುಂಬಕ್ಕೆ ಜೀವಬೆದರಿಕೆಯೊಡ್ಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಚ್ಲಂಗೋಡು ಕುಬಣೂರು ನಿವಾಸಿ ಜಸೀರ್ ಹಾಗೂ ಶಿರಿಯ ಕುನ್ನಿಲ್ ನಿವಾಸಿ ಅಬ್ದುಲ್ ಫಿರೋಸ್ ಬಂಧಿತರು.
ಅಂಗಡಿಮೊಗರಿನಲ್ಲಿ ಪೆÇಲೀಸರನ್ನು ಕಂಡು ಪರಾರಿಯಾಗುವ ಯತ್ನದಲ್ಲಿದ್ದ ಕಾರು ಪಲ್ಟಿಯಾಗಿ ಬಾಲಕ ಮೃತಪಟ್ಟ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕುಂಬಳೆ ಠಾಣೆ ಎಸ್.ಐ ಮನೆಗೆ ಇತ್ತೀಚೆಗೆ ತಂಡವೊಂದು ಬೈಕಲ್ಲಿ ತೆರಳಿ ಅವರ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡಿತ್ತು. ಎಸ್.ಐ ಪತ್ನಿ ತಂದೆ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಮನೆ ವಠಾರದ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಪತ್ತೆಯಾಗಿರುವ ಸ್ಕೂಟರ್ ಸವಾರರಿಬ್ಬರನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಗಳನ್ನು ಬಂಧೀಸಲಾಗಿದೆ.
ಬುಧವಾರ ಸಂಜೆ ಎಸ್.ಐ ರಜಿತ್ ಹಾಗೂ ಕುಟುಂಬ ವಾಸಿಸುತ್ತಿರುವ ಮೊಗ್ರಾಲಿನ ಮಾಳಯಂನಗರದ ಬಾಡಿಗೆ ಮನೆಗೆ ನೀಲಿ ಬಣ್ಣದ ಸ್ಕೂಟರಲ್ಲಿ ಆಗಮಿಸಿದ ತಂಡ ಎಸ್.ಐ ಹಾಗೂ ಅವರ ಕುಟುಂಬಕ್ಕೆ ಅವಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದೆ. ಈ ಬಗ್ಗೆ ಎಸ್.ಐ ರಜಿತ್ ಅವರ ಪತ್ನಿಯ ತಂದೆ ಕೊಲ್ಲಂ ನಿವಾಸಿ ಉಣ್ಣಿಕೃಷ್ಣನ್ ಪೊಲೀಸರಿಗೆ ದೂರು ನೀಡಿದ್ದರು.
ಕಾರು ಪಲ್ಟಿಯಾಗಿ ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಪೆರಾಲ್‍ಕಣ್ಣೂರು ನಿವಾಸಿ ದಿ. ಅಬ್ದುಲ್ಲ-ಸಫಿಯಾ ದಂಪತಿ ಪುತ್ರ ಫರಾಸ್(17)ಸಾವಿಗೀಡಾಗಿದ್ದನು. ಪೊಲೀಸರು ಹಿಂಬಾಲಿಸಿಹೋಗಿರುವುದರಿಂದ ಕಾರು ಪಲ್ಟಿಯಾಗಿದ್ದು, ವಿದ್ಯಾರ್ಥಿ ಸಾವಿಗೆ ಪೊಲೀಸರು ಕಾರಣರಾಗಿದ್ದು, ಇವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಮುಸ್ಲಿಂಲೀಗ್, ಯೂತ್ ಕಾಂಗ್ರೆಸ್, ಸಿಪಿಎಂ, ಎಸ್‍ಡಿಪಿಐ, ಯೂತ್‍ಲೀಗ್ ಸೇರಿದಂತೆ ವಿವಿಧ ಸಂಘಟನೆಗಳು ಠಾಣೆ ಎದುರು ಧರಣಿ ನಡೆಸಿತ್ತು.