ನವದೆಹಲಿ: ಮಧ್ಯಾಹ್ನದ ಊಟದ ಯೋಜನೆಗೆ ಕೇಂದ್ರ ಸರ್ಕಾರ ಹಣ ಮಂಜೂರು ಮಾಡಿಲ್ಲ ಎಂಬ ಶಿಕ್ಷಣ ಸಚಿವ ವಿ.ಶಿªಂÀಕುಟ್ಟಿ ಅವರ ವಾದ ಸುಳ್ಳೆಂದು ತಿಳಿದುಬಂದಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಪಿ.ಎಂ.ರೇಶನ್ ಯೋಜನೆಯ ಮೂಲಕ ಮಧ್ಯಾಹ್ನದ ಊಟವನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರವು 132.9 ಕೋಟಿ ರೂ.ಒದಗಿಸಿದೆ. ಆದರೆ ರಾಜ್ಯ ಸರ್ಕಾರ ಷೇರು ಮೊತ್ತ ಪಾವತಿಸಿಲ್ಲ. ಇದು ಯೋಜನೆಯ ಬಿಕ್ಕಟ್ಟಿಗೆ ಕಾರಣ ಎಂದು ಶಿಕ್ಷಣ ಸಚಿವಾಲಯ ಹೇಳಿದೆ.
ಕೇಂದ್ರವು ರಾಜ್ಯಕ್ಕೆ 132.9 ಕೋಟಿ ರೂ.ನೀಡಿದೆ. ಆದರೆ ರಾಜ್ಯವು ಯೋಜನೆಗೆ ತನ್ನಪಾಲು ನೀಡಿಲ್ಲ ಮತ್ತು ಕೇಂದ್ರ ನೀಡಿದ ಹಣವನ್ನು ಯೋಜನೆ ಅನುಷ್ಠಾನ ಖಾತೆಗೆ ವರ್ಗಾಯಿಸಿಲ್ಲ. ಮಧ್ಯಾಹ್ನದ ಊಟದ ಯೋಜನೆ ಬಿಕ್ಕಟ್ಟಿಗೆ ಸಿಲುಕಲು ಕಾರಣ ಯೋಜನೆ ಅನುಷ್ಠಾನಕ್ಕೆ ನೋಡಲ್ ಖಾತೆಗೆ ಹಣ ತಲುಪದಿರುವುದು ಕಾರಣ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.
ಕೇಂದ್ರ ಸರ್ಕಾರ ಅನುದಾನ ನೀಡದಿರುವುದು ಯೋಜನೆ ಅನುಷ್ಠಾನ ಬಿಕ್ಕಟ್ಟಿಗೆ ಕಾರಣ ಎಂದು ಶಿಕ್ಷಣ ಸಚಿವರು ನಿನ್ನೆ ಆರೋಪಿಸಿದ್ದರು. ಸಮಯಕ್ಕೆ ಸರಿಯಾಗಿ ಅಂಕಿ-ಅಂಶ ನೀಡಿದರೂ ಹಣ ವರ್ಗಾವಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಸಚಿವರು ಆರೋಪಿಸಿದ್ದರು. ಇದಾದ ಬಳಿಕ ಕೇಂದ್ರ ಶಿಕ್ಷಣ ಸಚಿವಾಲಯ ಸತ್ಯವನ್ನು ಸ್ಪಷ್ಟಪಡಿಸಲು ಮುಂದಾಯಿತು. ಈ ಕುರಿತ ದಾಖಲೆಗಳನ್ನೂ ಸಚಿವಾಲಯ ಹಂಚಿಕೊಂಡಿದೆ.