ಕಾಸರಗೋಡು: ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪಾತ್ತಿಕರ ಆನಮಙಲ್ ನಿವಾಸಿ ಸದಾನಂದನ್ ಅವರಿಗೆ ಸೇವಾ ಭಾರತಿ ಎಳೇರಿ ಮತ್ತು ಬಳಾಲ್ ಪಂಚಾಯಿತಿ ಸಮಿತಿ ವತಿಯಿಂದ ಸದಾನಿರ್ಮಿಸಿಕೊಟ್ಟ ಹೊಸ ಮನೆಯ ಕೀಲಿಕೈ ಹಸ್ತಾಂತರ ಸಮಾರಂಭ ಭಾನುವಾರ ನಡೆಯಿತು.
ಸರ್ಕಾರದ ವಸತಿಯೋಜನೆಯನ್ವಯ ಇವರಿಗೆ ಮನೆ ಮಂಜೂರುಗೊಳಿಸಲು ವೆಸ್ಟ್ ಎಳೇರಿ ಗ್ರಾಮ ಪಂಚಾಯಿತಿ ಮುಂದಾಗದ ಹಿನ್ನೆಲೆಯಲ್ಲಿ ಸೇವಾಭಾರತಿ ಹೊಸ ಮನೆ ನಿರ್ಮಾಣಕಾರ್ಯ ಕೈಗೆತ್ತಿಕೊಂಡಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ರವಿಶತಂತ್ರಿ ಕುಂಟಾರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ಪಿ. ಬಾಬು ಕುಟುಂಬದವರಿಗೆ ಕೀಲಿಕೈ ಹಸ್ತಾಂತರಿಸಿದರು.