HEALTH TIPS

ಕಾರ್ಯತಂತ್ರ ರೂಪಿಸಲು 'ಇಂಡಿಯಾ' ಸಿದ್ಧತೆ

              ವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಸರ್ಕಾರದ ನಿರ್ಧಾರದ ಹಿಂದೆಯೇ ಪ್ರತಿಪಕ್ಷಗಳ ಮೈತ್ರಿಕೂಟ 'ಇಂಡಿಯಾ' ತನ್ನ ಕಾರ್ಯತಂತ್ರ ರೂಪಿಸಲು ಸಿದ್ಧತೆ ಆರಂಭಿಸಿದೆ. ಈ ಕುರಿತು ಚರ್ಚಿಸಲು ಕಾಂಗ್ರೆಸ್‌ ಪಕ್ಷ ಮಂಗಳವಾರ ಹಿರಿಯ ನಾಯಕರ ಸಭೆ ಕರೆದಿದೆ. ನಂತರ ವಿವಿಧ ಪಕ್ಷಗಳ ಸದನ ನಾಯಕರ ಸಭೆಯೂ ನಡೆಯಲಿದೆ.

               ಪಕ್ಷದ ನಾಯಕಿ ಸೋನಿಯಾಗಾಂಧಿ ನೇತೃತ್ವದ 'ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಮಿತಿ'ಯು ಮಂಗಳವಾರ ಮೊದಲಿಗೆ ಸಭೆ ಸೇರಲಿದ್ದು ಪಕ್ಷದ ಕಾರ್ಯತಂತ್ರವನ್ನು ಅಂತಿಮಗೊಳಿಸಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಆ ನಂತರ ಅಂದೇ ರಾತ್ರಿ 'ಇಂಡಿಯಾ' ನಾಯಕರ ಸಭೆಯೂ ನಡೆಯಲಿದೆ.

             ಮೂಲಗಳ ಪ್ರಕಾರ, ವಿಶೇಷ ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ, ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತಂತೆ ಈ ಎರಡೂ ಸಭೆಗಳಲ್ಲೂ ವಿಸ್ತೃತ ಚರ್ಚೆ ನಡೆಯಲಿದೆ. ಈಗಿನ ವೇಳಾಪಟ್ಟಿಯಂತೆ ಸೆ.18ರಿಂದ ಐದು ದಿನ ಕಾಲ ಸಂಸತ್ತಿನ ವಿಶೇಷ ಅಧಿವೇಶನವು ನಡೆಯಲಿದೆ.

ಮುಂಬೈನಲ್ಲಿ ಮೂರು ದಿನಗಳ ಹಿಂದೆಯಷ್ಟೇ 'ಇಂಡಿಯಾ' ಮುಖಂಡರ ಮೂರನೇ ಸಭೆ ನಡೆಯಿತು. ಈಗ ಸಂಸತ್ತಿನ ಉಭಯ ಸದನಗಳಲ್ಲಿ ವಿವಿಧ ವಿರೋಧಪಕ್ಷಗಳ ಸದನ ನಾಯಕರ ಸಭೆಯು ನಡೆಯಲಿದೆ.

                   ಕೇಂದ್ರ ಸರ್ಕಾರವು ಇತ್ತೀಚಿಗೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ₹ 200ರಷ್ಟು ಇಳಿಸಿದೆ. ಈಗ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದೆ. ಇನ್ನೊಂದೆಡೆ, ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಿದೆ. ಅದಾನಿ ಸಮೂಹ ಕುರಿತ ಇತ್ತೀಚಿನ ಬೆಳವಣಿಗೆಗಳು ಹಾಗೂ ಮುಂಬೈನಲ್ಲಿ ನಡೆದಿದ್ದ 'ಇಂಡಿಯಾ' ಮುಖಂಡರ ಸಭೆಯ ಬೆಳವಣಿಗೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯುವುದೇ ಈ ಎಲ್ಲ ಕ್ರಮಗಳ ಗುರಿ ಎಂದು ಪ್ರತಿಪಕ್ಷಗಳು ವ್ಯಾಖ್ಯಾನಿಸಿವೆ.

                 ಏಕಕಾಲದಲ್ಲಿ ಚುನಾವಣೆ ಕಾರ್ಯಸಾಧ್ಯತೆ ಪರಿಶೀಲಿಸಲು ರಚಿಸಿರುವ ಉನ್ನತ ಮಟ್ಟದ ಸಮಿತಿಯಿಂದ ಖರ್ಗೆ ಹೆಸರು ಕೈಬಿಟ್ಟಿರುವುದು ಹಾಗೂ ಸಮಿತಿಯ ಭಾಗವಾಗಲು ಅಧೀರ್‌ ರಂಜನ್‌ ಚೌಧರಿ ನಿರಾಕರಿಸಿರುವ ವಿಷಯವು ಮಂಗಳವಾರದ ಸಭೆಗಳಲ್ಲಿ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

                  ಕೇಂದ್ರದ ತೀರ್ಮಾನಗಳಿಗೆ ಸಂಬಂಧಿಸಿದಂತೆ ಯಾವ ನಿಲುವು ತಳೆಯಬೇಕು ಎಂದು ಮುಖಂಡರು ಚರ್ಚಿಸಲಿದ್ದಾರೆ. ಅದಾನಿ ಸಮೂಹದ ಬೆಳವಣಿಗೆ ಕುರಿತಂತೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಪುನರುಚ್ಚರಿಸಲಿದೆ. ಈ ವಿಷಯದಲ್ಲಿ 'ಇಂಡಿಯಾ' ಪಕ್ಷಗಳಲ್ಲಿ ಭಿನ್ನ ಅಭಿಪ್ರಾಯಗಳಿವೆ.

                 ಜೆಪಿಸಿ ತನಿಖೆ ಬೇಡಿಕೆಗೆ ತೃಣಮೂಲ ಕಾಂಗ್ರೆಸ್ ಮತ್ತು ಆಮ್‌ ಆದ್ಮಿ ಪಕ್ಷದ (ಎಎಪಿ) ಸಹಮತವಿಲ್ಲ. ಇತರ ಪಕ್ಷಗಳು ಪರವಾಗಿವೆ. ಅದಾನಿ ಸಮೂಹದ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೂರು ನೀಡುವ ಸಂದರ್ಭದಲ್ಲಿಯೂ ಎನ್‌ಸಿಪಿ ಕೈಜೋಡಿಸಿರಲಿಲ್ಲ.

                  ಈಗ ವದಂತಿ ಇರುವಂತೆ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರೆ ಯಾವ ನಿಲುವು ತಳೆಯಬೇಕು ಎಂದು ವಿರೋಧಪಕ್ಷಗಳ ಮೈತ್ರಿಕೂಟ ಚರ್ಚಿಸುವ ಸಾಧ್ಯತೆಯಿದೆ. ಎಸ್‌ಪಿ ಮತ್ತು ಆರ್‌ಜೆಡಿ ಪಕ್ಷಗಳು ಚುನಾವಣೆಯಲ್ಲಿ ಮಹಿಳೆಯರಿಗೆ ಒಬಿಸಿ ಕೋಟಾ ಬೇಕು ಎಂಬ ಬೇಡಿಕೆಯನ್ನು ಇಟ್ಟಿವೆ.

              ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನ ಕುರಿತು ಕಾರ್ಯಸೂಚಿ ಪ್ರಕಟಿಸಿಲ್ಲ ಎಂಬುದು ಸಭೆಯಲ್ಲಿ ಚರ್ಚೆಗೆ ಬರಲಿದ್ದು, ವಿಶೇಷ ಅಧಿವೇಶನದ ಕಲಾಪದ ಕಾರ್ಯಸೂಚಿಯಿಂದ ಶೂನ್ಯವೇಳೆ, ಪ್ರಶ್ನೋತ್ತರ ಅವಧಿ ಕೈಬಿಟ್ಟಿರುವ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗುವ ಸಂಭವವಿದೆ.


                         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries