ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ವತಿಯಿಂದ ಕೃತಿ ಸಮೀಕ್ಷೆ, ಕೃತಿ ಬಿಡುಗಡೆ, ಕನ್ನಡ ಭವನ ಪ್ರಶಸ್ತಿ ಪ್ರದನ ಸಮಾರಂಭ-2023 ಕಾರ್ಯಕ್ರಮ ಅ. 1ರಂದು ಮಧ್ಯಾಹ್ನ 2ರಿಂದ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ಜರುಗಲಿದೆ.
ಇದೇ ಸಂದರ್ಭ ಕನ್ನಡ ಭವನ ಪ್ರಕಾಶನ ಸಂಸ್ಥೆಯನ್ನು ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸುವರು. ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಕನ್ನಡ ಮಯೂರಿ ಪ್ರಶಸ್ತಿ ಪ್ರದಾನ, ಕನ್ನಡ ಭವನದ ಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುವುದು. ಉದಯೋನ್ಮುಖ ಕವಯಿತ್ರಿ ರೇಖಾ ಸುಧೇಶ್ ರಾವ್ ಅವರ ನವಚೇತನ ಕವನ ಸಂಕಲನ ಬಿಡುಗಡೆ ನಡೆಯುವುದು. ಕವಿ ಗುಣಾಜೆ ರಾಮಚಂದ್ರ ಭಟ್ ಕೃತಿ ಪರಿಚಯ ನೀಡುವರು.ವೀಣಾ ನಾಗರಾಝ್ ವಾಮಂಜೂರು ಅವರ 'ನಂದಾ ದೀಪ'ಕೃತಿಯ ಬಗ್ಗೆ ಸಾಹಿತಿ ವಿರಾಜ್ ಅಡೂರು ಕೃತಿ ಪರಿಚಯ ನೀಡುವರು.