ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡೋತ್ಸವ ಜರಗಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರಹಿಮಾನ್ ಟಿ.ಎಂ ಅವರ ಅಧ್ಯಕ್ಷತೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಎಂ ಧ್ವಜಾರೋಹಣಗೈದರು. ಶಾಲಾ ಮಕ್ಕಳು ರಕ್ಷಕರು ಮತ್ತು ಆಧ್ಯಾಪಕರಿಂದ ಮ್ಯಾರಥಾನ್ ಓಟ ನಡೆಯಿತು. ಮ್ಯಾರಥಾನ್‍ಗೆ ರಕ್ಷಕ-ಶಿಕ್ಷಕ ಸಂಘದ ಸದಸ್ಯೆ ಸುಷ್ಮಾ ಧ್ವಜವನ್ನು ಶಾಲಾ ಮುಖ್ಯೋಪಧ್ಯಾಯಿನಿಗೆ ನೀಡುವ ಮೂಲಕ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಆಟೋಟ ಸ್ಪರ್ಧೆಗಳು ಜರಗಿತು.
ಸಮಾರೋಪ ಸಮಾರಂಭದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮುಬೀನ ನೌಫಲ್ ಉದ್ಘಾಟಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್, ಎಸ್.ಎಂ.ಸಿ ಉಪಾಧ್ಯಕ್ಷ ಉಮ್ಮರ್‍ಫಾರೂಕ್, ಮಶೂದ, ಇಂತಿಯಾಸ್, ಫಾರಿಸ, ರಿಯಾಸ್, ಮಹಮ್ಮದ್ ಅಸರ್, ಶುಚಿತ್ವ ಮಿಶನ್ ಸದಸ್ಯೆ ಸತ್ಯ, ಫಿರೋಜ್, ಅಪ್ಸಾ ಟೀಚರ್, ರಿಯಾಸ್, ಎಂ.ಎಸ್ ರೇವತಿ, ಜಸೀಲ, ಧನ್ಯ, ಫಾತಿಮತ್ ಫಝೀನ ಬಹುಮಾನ ವಿತರಿಸಿದರು. ಬ್ಲೂ-ಹೌಸ್ ತಂಡವು ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಯಿತು. ಎಲ್ಲೋ-ಹೌಸ್ ತಂಡವು ದ್ವಿತೀಯ ಸ್ಥಾನ ಪಡೆದು ರನ್ನರ್ ಪ್ರಶಸ್ತಿಗಳಿಸಿತು. ಇಸ್ಮಾಯಿಲ್ ಮಾಸ್ತರ್ ಸ್ವಾಗತಿಸಿ, ಅಬುಲ್ ಬಶೀರ್ ಕೆ ವಂದಿಸಿದರು.