ಎರ್ನಾಕುಳಂ: ಅಕ್ರಮ ಆಸ್ತಿ ಗಳಿಕೆ ದೂರಿನ ಸಂಬಂಧ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಹೇಳಿಕೆಯನ್ನು ವಿಜಿಲೆನ್ಸ್ ದಾಖಲಿಸಿಕೊಂಡಿದೆ.
ಸುಧಾಕರನ್ ಅವರ ಈ ಹಿಂದಿನ ಚಾಲಕ ಪ್ರಶಾಂತ್ ಬಾಬು ಅವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಅವರ ಸ್ಮರಣಾರ್ಥ ರಚಿಸಿರುವ ಟ್ರಸ್ಟ್ ಹೆಸರಿನಲ್ಲಿ ಹಣ ವಸೂಲಿ ಸೇರಿದಂತೆ ವಿವಿಧ ವಹಿವಾಟುಗಳಲ್ಲಿ ಸುಧಾಕರನ್ ಕೋಟಿಗಟ್ಟಲೆ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿಜಿಲೆನ್ಸ್‍ಗೆ ನೀಡಿರುವ ದೂರಿನಲ್ಲಿ ಪ್ರಮುಖವಾಗಿ ಸುಧಾಕರನ್ ಅವರು ಅರಣ್ಯ ಸಚಿವರಾಗಿದ್ದಾಗ ಭ್ರಷ್ಟಾಚಾರ ಎಸಗಿದ್ದಾರೆ ಮತ್ತು ಕಣ್ಣೂರು ಡಿಸಿಸಿ ಕಚೇರಿ ನಿರ್ಮಾಣದಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳಿವೆ. ಪ್ರಶಾಂತ್ ಅವರು 7 ಜೂನ್ 2021 ರಂದು ದೂರು ದಾಖಲಿಸಿದ್ದರು. ದೂರಿನ ಬಗ್ಗೆ ವಿಜಿಲೆನ್ಸ್ ವಿಸ್ತೃತ ತನಿಖೆಗೆ ಶಿಫಾರಸು ಮಾಡಿತ್ತು.
ಈ ಹಿಂದೆ ವಿಜಿಲೆನ್ಸ್ ಸೆಲ್ ಎಸ್ಪಿ ಕೆಪಿ ಅಬ್ದುಲ್ ರಜಾಕ್, ಪ್ರಕಾಶ್ ಬಾಬು ಅವರ ಹೇಳಿಕೆಯನ್ನೂ ದಾಖಲಿಸಲಾಗಿತ್ತು. ಗೃಹ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಸುಧಾಕರನ್ ವಿರುದ್ಧದ ಪ್ರಕರಣವು ಸರಿಯಾದ ರೀತಿಯಲ್ಲಿ ಮುಂದುವರಿಯುವುದೇ ಎಂದು ಪ್ರಶಾಂತ್ ಬಾಬು ಈ ಹಿಂದೆ ತಮ್ಮ ಆತಂಕವನ್ನು ಹಂಚಿಕೊಂಡಿದ್ದರು.
ಕೆಪಿಸಿಸಿ ಅಧ್ಯಕ್ಷರ ರಾಜಕೀಯ ವರ್ಚಸ್ಸಿಗೆ ಮಸಿ ಬಳಿಯುವ ಈ ಹೇಳಿಕೆ ಕಾಂಗ್ರೆಸ್ ಮತ್ತು ಯುಡಿಎಫ್‍ನಲ್ಲಿ ಚರ್ಚೆಗೆ ಕಾರಣವಾಗಿತ್ತು. ಆರೋಪಗಳು ಕಪೆÇೀಲಕಲ್ಪಿತವಾಗಿವೆ ಎಂಬುದು ಸುಧಾಕರನ್ ಅವರು ಸಮರ್ಥಿಸಿಕೊಂಡಿದ್ದಾರೆ.