ಪೆರ್ಲ: ಖಂಡಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಮೂರನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ, ಮಾಜಿ ಯೋಧಗೆ ಗೌರವಾರ್ಪಣೆ ಸಮಾರಂಭ ಖಂಡಿಗೆಯಲ್ಲಿ ಜರುಗಿತು. ಸಮಾರೋಪ ಸಮಾರಂಭದಲ್ಲಿ ಭಾರತೀಯ ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ಸದಾಶಿವ ನಾಯ್ಕ್ ಖಂಡಿಗೆ ಅವರನ್ನು ಈ ಸಂದರ್ಭ ಗೌರವಿಸಲಾಯಿತು.್ರೀ ಸುಬ್ರಾಯ ನಾಯಕ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯೆ ಉಷಾ ಗಣೇಶ್, ಮಾಜಿ ಸದಸ್ಯ ಪುಟ್ಟಪ್ಪ ಖಂಡಿಗೆ, ಲಲಿತಾ ಕೇಶವ ನಾಯ್ಕ್, ಪದ್ಮನಾಭ ಸುವರ್ಣ ಉಪಸ್ಥಿತರಿದ್ದರು. ಸದಾಶಿವ ಭಟ್ ಹರಿನಿಲಯ ಸ್ವಾಗತಿಸಿದರು. ಅಶೋಕ ಖಂಡಿಗೆ ವಂದಿಸಿದರು.
ಬೆಳಗ್ಗೆ ನಡೆದ ಸಮಾರಂಭವನ್ನು ಕವಯಿತ್ರಿ ನಿರ್ಮಲಾ ಸೇಸಪ್ಪ ಖಂಡಿಗೆ ಉದ್ಘಾಟಿಸಿದರು. ಉದಯ ಚೆಟ್ಟಿಯಾರ್ ಬಜಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಬೇಂಗಪದವು ಗಿರಿಜಾಂಬಾ ಎ ಎಲ್ ಪಿ ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಧಾರ್ಮಿಕ ಭಾಷಣ ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.