HEALTH TIPS

ಕೌತುಕ ಮೂಡಿಸಿದ ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪುರಾತತ್ವ ವಸ್ತು ಪ್ರದರ್ಶನ

            ಮುಳ್ಳೇರಿಯ: ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಾಕೃತಿ ಮತ್ತು ಕರಕುಶಲ ವಸ್ತು ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಶಾಲಾ ವಿಜ್ಞಾನೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನವು ಹಿಂದಿನ ತಲೆಮಾರುಗಳ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಸ್ತುಗಳಿಂದ ಸಂಪನ್ನವಾಗಿತ್ತು.


            ತಾಳೆಗರಿ, ವಾಲುರುಳಿ, ಚಾಪೆ, ಗೆರಸೆ, ತೈಲ ಬಾಂಡಲೆ, ರಾಟೆ, ಪೀಕದಾನಿ, ಬುಡ್ಡಿದೀಪ, ಕುಂಭ, ಕಡೆಗೋಲು, ಭಸ್ಮ ಪೆಟ್ಟಿಗೆ, ಚಿಮಣಿ ದೀಪ, ಗೆರಟೆಯ ವಿವಿಧ ವಸ್ತುಗಳು, ಪೂಜಾ ದೀಪಗಳು, ಟೇಪ್ ರೆಕಾರ್ಡರ್, ಕ್ಯಾಸೆಟ್, ಪ್ರಾಚೀನ ಕಾಲದ ಡಯಲ್‍ಗಳು ಇತ್ಯಾದಿ ಗಮನಸೆಳೆದವು. ಹೊಸ ಪೀಳಿಗೆಗೆ ಆಸಕ್ತಿದಾಯಕವಾಗಿ ಆಕರ್ಷಿಸಿದವು. ಅಲ್ಲದೆ, ಗೆರಟೆ, ಹುಲ್ಲು, ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸಿದ ಕರಕುಶಲ ಮತ್ತು ಚಿತ್ರಕಲೆಗಳನ್ನು ಪ್ರದರ್ಶಿಸಲಾಯಿತು. ವಸ್ತುಪ್ರದರ್ಶನ ವೀಕ್ಷಿಸಲು ಸಮೀಪದ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರು. ವಿಜ್ಞಾನ ಮೇಳ, ಸಮಾಜ ವಿಜ್ಞಾನ ಮೇಳ, ಗಣಿತ ಮೇಳ, ಐಟಿ ಮೇಳ ಹಾಗೂ ವೃತ್ತಿಪರಿಚಯ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸುವ ಹಬ್ಬವಾಯಿತು. 


          ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ವಿ. ನಿಮಿಷ ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎಂ.ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣನ್, ಪ್ರಾಂಶುಪಾಲ ಸಜೀವನ್ ಮದಪರಂಪತ್, ವಿಎಚ್‍ಎಸ್‍ಇ ವಿಭಾಗದ ಪ್ರಾಂಶುಪಾಲ ಸುಚೀಂದ್ರನಾಥ್, ಪಿಟಿಎ ಅಧ್ಯಕ್ಷ ರಾಜಾರಾಂ, ಹಿರಿಯ ಸಹಾಯಕಿ ಸಿ. ಶಾಂತಕುಮಾರಿ, ಸಿಬ್ಬಂದಿ ಕಾರ್ಯದರ್ಶಿ ಕೆ.ಬಿಂದು, ಐಟಿ ಸಂಯೋಜಕ ವಿ.ಎಂ.ಕೃಷ್ಣಪ್ರಸಾದ್ ಮಾತನಾಡಿದರು. ಮುಖ್ಯಶಿಕ್ಷಕ ಎ.ಎಂ.ಅಬ್ದುಲ್ ಸಲಾಂ ಸ್ವಾಗತಿಸಿ, ಎಸ್‍ಆರ್‍ಜಿ ಸಂಚಾಲಕ ಕೆ. ನಿಮಿಷ ಬಾಬು ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries