ನಾಗ್ಪುರ: 'ಭಾರತವು ಹಿಂದೂ ರಾಷ್ಟ್ರವಾಗಿದ್ದು, ಎಲ್ಲ ಭಾರತೀಯರು ಹಿಂದೂಗಳು. ಹಿಂದೂ ಎಂಬುದು ಎಲ್ಲ ಭಾರತೀಯರನ್ನು ಪ್ರತಿನಿಧಿಸುತ್ತದೆ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರ: 'ಭಾರತವು ಹಿಂದೂ ರಾಷ್ಟ್ರವಾಗಿದ್ದು, ಎಲ್ಲ ಭಾರತೀಯರು ಹಿಂದೂಗಳು. ಹಿಂದೂ ಎಂಬುದು ಎಲ್ಲ ಭಾರತೀಯರನ್ನು ಪ್ರತಿನಿಧಿಸುತ್ತದೆ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
'ದೈನಿಕ ತರುಣ ಭಾರತ' ಪತ್ರಿಕೆಯ ಮಾತೃಸಂಸ್ಥೆ ಶ್ರೀನರಕೇಸರಿ ಪ್ರಕಾಶನ ಲಿಮಿಟೆಡ್‌ನ ನೂತನ ಕಟ್ಟಡ 'ಮಧುಕರ ಭವನ'ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
'ಹಿಂದೂಸ್ತಾನವು (ಭಾರತ) ಹಿಂದೂ ರಾಷ್ಟ್ರವಾಗಿದ್ದು, ಇದು ವಾಸ್ತವ ಕೂಡ. ಭಾರತದಲ್ಲಿ ಸದ್ಯ ವಾಸಿಸುತ್ತಿರುವವರೆಲ್ಲ ಹಿಂದೂ ಸಂಸ್ಕೃತಿ, ಹಿಂದೂ ಪೂರ್ವಿಕರು ಹಾಗೂ ಹಿಂದೂ ನೆಲಕ್ಕೆ ನಂಟು ಹೊಂದಿರುವವರೇ ಆಗಿದ್ದಾರೆ. ಇದನ್ನು ಹೊರತುಪಡಿಸಿದಂತೆ ಮತ್ತೇನೂ ಇಲ್ಲ' ಎಂದು ಹೇಳಿದರು.
'ಕೆಲ ಜನರಿಗೆ ಇದು ಅರ್ಥವಾಗಿದೆ. ಇನ್ನೂ ಕೆಲವರಿಗೆ ಈ ವಿಷಯ ಅರ್ಥವಾಗಿದ್ದರೂ ಅನುಷ್ಠಾನಗೊಳಿಸುತ್ತಿಲ್ಲ. ಅವರಲ್ಲಿನ ಸ್ವಾರ್ಥವೇ ಇದಕ್ಕೆ ಕಾರಣ. ಮತ್ತೂ ಕೆಲವರು ಈ ವಿಚಾರವನ್ನು ಅರ್ಥ ಮಾಡಿಕೊಂಡಿಲ್ಲ ಇಲ್ಲವೇ ಮರೆತು ಬಿಟ್ಟಿದ್ದಾರೆ' ಎಂದರು.
'ವರದಿಗಾರಿಕೆ ನಿಷ್ಪಕ್ಷಪಾತದಿಂದ ಕೂಡಿರಬೇಕು. ನಾವು ನಂಬಿರುವ ಆದರ್ಶಗಳಿಗೆ ಬದ್ಧವಾಗಿರುವ ಜೊತೆಗೆ ವಾಸ್ತವ ಸಂಗತಿಗಳ ಆಧಾರದಲ್ಲಿ ವರದಿಗಳನ್ನು ಪ್ರಕಟಿಸಬೇಕು' ಎಂದು ಭಾಗವತ್ ಹೇಳಿದರು.
'ಪರಿಸರದ ಬಗ್ಗೆ ಕಾಳಜಿ, ಸ್ವದೇಶಿ ಕೇಂದ್ರಿತ ನಡೆ ನಮ್ಮದಾಗಬೇಕು' ಎಂದ ಅವರು, 'ಕೌಟುಂಬಿಕ ಮೌಲ್ಯಗಳು ಹಾಗೂ ಶಿಸ್ತಿಗೂ ಮಹತ್ವ ನೀಡಬೇಕು' ಎಂದರು.
-ಮೋಹನ ಭಾಗವತ್, ಆರ್‌ಎಸ್‌ಎಸ್ ಮುಖ್ಯಸ್ಥಭಾರತೀಯ ಸಿದ್ಧಾಂತಕ್ಕೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ. ನಮ್ಮ ಸಿದ್ಧಾಂತ-ತತ್ವಗಳಿಗೆ ಪರ್ಯಾಯವೆಂಬುದೇ ಇಲ್ಲ.