ನವದೆಹಲಿ: ಸಂಸತ್ ಅಧಿವೇಶನ ನಡೆಸುವುದಕ್ಕೆ ಸಂಬಂಧಪಟ್ಟಂತೆ ಸಂವಿಧಾನದಲ್ಲಿನ ಅವಕಾಶಗಳು ಹಾಗೂ ಸಂಸದೀಯ ವಿಧಾನಗಳನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ತಿರುಚುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಗುರುವಾರ ಆರೋಪಿಸಿದ್ದಾರೆ.

ಸಂಸತ್‌ನ ವಿಶೇಷ ಅಧಿವೇಶನ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿಗೆ ಬರೆದಿದ್ದ ಪತ್ರಕ್ಕೆ ನೀಡಲಾಗಿರುವ ಉತ್ತರ ದಾರಿ ತಪ್ಪಿಸುವಂತಿದೆ ಎಂಬ ಜೈರಾಮ್ ರಮೇಶ್ ಅವರ ಟೀಕೆಗೆ ಜೋಶಿ ಪ್ರತಿಕ್ರಿಯಿಸಿದ್ದಾರೆ.
'ಸಂಸತ್ ಹಾಗೂ ಸಂಸದೀಯ ನಡಾವಳಿಗಳನ್ನು ಅವಹೇಳನ ಮಾಡುವಂತಹ ತಪ್ಪು ಮಾಹಿತಿ ಹಬ್ಬಿಸುವುದನ್ನು ತಡೆಯುವುದು ಅಗತ್ಯ' ಎಂದು ಜೋಶಿ ಹೇಳಿದ್ದಾರೆ.
ಈ ಹಿಂದೆ, ಸಂಸತ್‌ನ ವಿಶೇಷ ಅಧಿವೇಶನದ ಕಾರ್ಯಸೂಚಿ ಕುರಿತು ಬಹಳ ಮುಂಚಿತವಾಗಿ ತಿಳಿಸಲಾಗುತ್ತಿತ್ತು. ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಸಂಸದೀಯ ನಡಾವಳಿಗಳನ್ನು ಬದಲಾಯಿಸಲಾಗುತ್ತಿದೆ ಎಂದು ರಮೇಶ್ ಹೇಳಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜೋಶಿ, 'ಜಿಎಸ್‌ಟಿ ಜಾರಿಗೆ ಸಂಬಂಧಿಸಿ 2017ರ ಜೂನ್ 30ರಂದು ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಐತಿಹಾಸಿಕ ಕಲಾಪ ನಡೆಸಲಾಗಿತ್ತು. ಅದು ಸಂವಿಧಾನದ 85ನೇ ವಿಧಿಯಡಿ ನಡೆಸಿದ್ದ ಅಧಿವೇಶನವಾಗಿರಲಿಲ್ಲವೇ?' ಎಂದಿದ್ದಾರೆ.
ಸಂವಿಧಾನದ 70ನೇ ವಾರ್ಷಿಕೋತ್ಸವದ ಅಂಗವಾಗಿ 2019ನೇ ನವೆಂಬರ್ 26ರಂದು ಸೆಂಟ್ರಲ್‌ಹಾಲ್‌ನಲ್ಲಿ ವಿಶೇಷ ಕಲಾಪ ನಡೆಸಲಾಗಿತ್ತು. ಅದೂ ಕೂಡ, ಸಂವಿಧಾನದ 85ನೇ ವಿಧಿಯಡಿ ನಡೆದಿದ್ದ ಅಧಿವೇಶನವಲ್ಲವೇ' ಎಂದು ಜೋಶಿ ಹೇಳಿದ್ದಾರೆ.