ನವದೆಹಲಿ: ನೌಕದಾಳದ ಸಿಬ್ಬಂದಿ ಹಾಗೂ ಅವರ ಕುಟುಂಬದವರ ಪ್ರಯಾಣಕ್ಕಾಗಿ ಭಾರತೀಯ ನೌಕಾದಳವು ಮೋಟಾರು ವಾಹನ ಅಗ್ರಿಗೇಟರ್ ಉಬರ್‌ನೊಂದಿಗೆ ಸೋಮವಾರ ಒಡಂಬಡಿಕೆ ಮಾಡಿಕೊಂಡಿದೆ.
'ಉಬರ್‌ನೊಂದಿಗಿನ ಈ ಒಡಂಬಡಿಕೆಯು ನೌಕಾದಳದ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರ ಪ್ರಯಾಣಕ್ಕೆ ಹೆಚ್ಚು ಅನುಕೂಲವಾಗಲಿದೆ. ಕಂಪನಿಯು ನೌಕಾದಳದ ಸಿಬ್ಬಂದಿಗೆ ವಿಶ್ವಾಸಾರ್ಹ, ಅನುಕೂಲಕರ, ಸುರಕ್ಷಿತ ಮತ್ತು ಆರ್ಥಿಕ ಚಲನಶೀಲತೆಯ ಪರಿಹಾರಗಳನ್ನು ಒದಗಿಸುವ ವಿಶ್ವಾಸವಿದೆ. ದೇಶವ್ಯಾಪಿ ಇರುವ ನೌಕಾದಳದ ಸಿಬ್ಬಂದಿಗೆ ಈ ಸೌಲಭ್ಯ ಸಿಗಲಿದೆ' ಎಂದರು.
'ಭಾರತೀಯ ನೌಕಾದಳದ ಸಿಬ್ಬಂದಿಗಾಗಿಯೇ ಉಬರ್ ಪ್ರತ್ಯೇಕ ಆಯಪ್ ಅಭಿವೃದ್ಧಿಪಡಿಸಲಿದೆ. ಪ್ರೀಮಿಯರ್ ಎಕ್ಸಿಕ್ಯುಟಿವ್ ಕ್ಯಾಬ್ ಶ್ರೇಣಿಯನ್ನು ನೀಡಲಿದೆ. ಜತೆಗೆ ಅತಿ ಬೇಡಿಕೆಯ ಅವಧಿಯಲ್ಲೂ ಸ್ಪರ್ಧಾತ್ಮಕ ಬೆಲೆಯಲ್ಲಿ ಸೌಲಭ್ಯ ಲಭ್ಯ. ಅತಿ ಹೆಚ್ಚು ಮನ್ನಣೆ ಪಡೆದ ಚಾಲಕರನ್ನೇ ಇದಕ್ಕೆ ನಿಯೋಜಿಸಲಿದೆ. ಕಾಯ್ದಿರಿಸಿದ ಕ್ಯಾಬ್ ರದ್ದುಪಡಿಸಿದರೆ ಅದನ್ನು ಶುಲ್ಕ ವಿಧಿಸುವುದಿಲ್ಲ. ದಿನದ 24 ಗಂಟೆಗಳ ಕಾಲ ಉಬರ್ ಸೌಲಭ್ಯ ಇರಲಿದೆ' ಎಂದು ಉಬರ್ ಸಿಬ್ಬಂದಿ ತಿಳಿಸಿದರು.
''ಶಿಪ್ ಫಸ್ಟ್' ಎಂಬ ಯೋಜನೆಯ ಭಾಗವಾಗಿ 'ಸಿಬ್ಬಂದಿಯ ಸಂತೋಷ' ಎಂಬ ನೌಕಾದಳದ ಮುಖ್ಯಸ್ಥರ ಮುನ್ನೋಟದ ಫಲವಾಗಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸೇನಾ ವಲಯದಲ್ಲಿ ಇದು ಚೊಚ್ಚಲ ಪ್ರಯತ್ನವಾಗಿದೆ. ಡಿಜಿಟಲ್ ಇಂಡಿಯಾದ ಭಾಗವಾಗಿರುವ ಈ ಒಡಂಬಡಿಕೆಯಿಂದ ಹೊಸ ತಂತ್ರಜ್ಞಾನದ ಮೂಲಕ ಹೊಸ ಬದಲಾವಣೆ ಸಾಧ್ಯವಾಗಲಿದೆ' ಎಂದರು.