ಉಪ್ಪಳ: ಕೇರಳದಲ್ಲೇ ಅತಿ ಹೆಚ್ಚು ಉರ್ದು ಮಾತೃ ಭಾμÉಯನ್ನಾಡುವ ಹಾಗೂ ಅತಿ ಹೆಚ್ಚು ಹನಫಿ ಸಮುದಾಯದ ಮುಸಲ್ಮಾನರು ವಾಸವಾಗಿರುವ ಉಪ್ಪಳದಲ್ಲಿ ಅಹ್ಲೇ ಸುನ್ನತ್ ಹನಫಿ ಜಾಮಿಯಾ ಮಸೀದಿ ನೇತೃತ್ವದಲ್ಲಿ ಬಿರುಸಾಗಿ ಸುರಿಯುವ ಮಳೆಯನ್ನೂ ಕೂಡಾ ಲೆಕ್ಕಿಸದೆ ನಡೆದ ಜಶ್ವೇ ಈದ್ ಮಿಲಾದ್ ರಾಲಿ ವಿಶೇಷ ಗಮನವನ್ನು ಸೆಳೆಯಿತು.
ಇಲ್ಲಿಯ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿ ಗುಣಗಾನದ ಹಾಡುಗಳು, ದಫ್ ನೊಂದಿಗೆ ಮಿಲಾದ್ ರಾಲಿ ನಡೆಯಿತು. ವಿಶೇಷವಾದ ಅರಬ್ ದೇಶದ ಉಡುಗೆತೊಡುಗೆಗಳನ್ನು ಧರಿಸಿ ಸುಗಂಧ ದ್ರವ್ಯಗಳನ್ನು ಹಚ್ಚಿಕೊಂಡು ಮಕ್ಕಳು ಯುವಕರು ಹಾಗೂ ಹಿರಿಯರು ಪ್ರವಾದಿ ಕೀರ್ತನೆಯನ್ನು ಹೇಳಿಕೊಂಡು ಹನಫಿ ಬಜಾರಿನಿಂದ ಉಪ್ಪಳ ನಗರದ ತನಕ ಬಹಳ ಶಿಸ್ತಿನಿಂದ ರಾಲಿ ನಡೆಸಿ ಜನಮೆಚ್ಚುಗೆಗೆ ಪಾತ್ರರಾದರು.
ಬಳಿಕ ಜಮಾಅತಿನ ಅಧೀನದಲ್ಲಿರುವ 13 ಮದ್ರಸಗಳಿಂದ ಆಯ್ದ ಪ್ರತಿಭಾ ವಿದ್ಯಾರ್ಥಿಗಳಿಂದ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಗಳಲ್ಲಿ ಮದ್ರಸ ವಿದ್ಯಾರ್ಥಿ ವಿದ್ಯಾರ್ಥಿನಿಗಳು ಭಾಗವಹಿಸಿದರು. ಜೊತೆಯಾಗಿ ಮಕ್ಕಳಿಗೆ ಹಾಡು, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ್ಪಳದಲ್ಲಿ ನಡೆಯುವ ಜಶ್ವೇ ಮಿಲಾದ್ ಕೇರಳ ರಾಜ್ಯದಲ್ಲೇ ಖ್ಯಾತಿಯನ್ನು ಪಡೆದಿದೆ. ಇಲ್ಲಿನ ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ನಾಡಿಗೆ ಕೀರ್ತಿಯನ್ನು ತಂದಿದ್ದಾರೆ.. ಗುರುವಾರದಂದು ಬೆಳಿಗ್ಗೆ ಹಳೆಯ ಹಿಂದುಸ್ಥಾನಿ ಶಾಲಾ ಆವರಣದಲ್ಲಿ ನಡೆದ ಮೌಲೂದ್ ಪಾರಾಯಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.
ಮಕ್ಕಳ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಬೆಂಗಳೂರಿನಿಂದ ಆಗಮಿಸಿದ ಮೌಲಾನಾ ಇಕ್ರಾರ್ ಸಾಬ್ ತಂಡ, ಅಮೀರ್ ಕೋಡಿ ಬೈಲು ತಂಡ ತೀರ್ಪು ನೀಡಿದರು. 13 ಮದ್ರಸಗಳಿಂದ ಆಯ್ದ ಮಕ್ಕಳ ತಂಡ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಬಳಿಕ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಓಪನ್ ವಿಶ್ವವಿದ್ಯಾಲಯದ ಪೆÇ್ರಫೆಸರ್ ನಸ್ರುಲ್ಲ ಖಾನ್ ರವರು ಗಿ4 ನ್ಯೂಸಿನೊಂದಿಗೆ ಮಾತನಾಡಿ (ಃಥಿಣes 1) ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ ಕರ್ನಾಟಕ ಕೇರಳದ ಗಡಿ ಭಾಗದ ಉಪ್ಪಳದಲ್ಲಿ ಉರ್ದು ಭಾಷಿಗರ ಮಿಲಾದ್ ದಿನಾಚರಣೆ ಭಾರೀ ಸಂಭ್ರಮವನ್ನು ತಂದಿದೆ. ಸೌಮ್ಯ ಸ್ವಭಾವದ ಈ ಜನತೆಯ ಶಿಸ್ತುಬದ್ದವಾದ ಕಾರ್ಯಕ್ರಮ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಬಳಿಕ ಮಸೀದಿ ಅಧ್ಯಕ್ಷ ಅಬ್ದುಲ್ ರಶೀದ್ ಉಸ್ಮಾನ್ ರವರು v4 ನ್ಯೂಸಿನೊಂದಿಗೆ ಮಾತನಾಡಿ(ಃಥಿಣes2) ಎಲ್ಲಾ ವರ್ಷದಂತೆ ಈ ವರ್ಷ ಕೂಡಾ ನಾವು ವಿಜೃಂಭಣೆಯಿಂದ ಮಿಲಾದ್ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ನಮ್ಮ ಮಸೀದಿ ಅಧೀನದಲ್ಲಿರುವ 13 ಮದ್ರಸ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿರುವುದಾಗಿ ಹೇಳಿದ ಅವರು ವ|ಂದಿಸಿದರು.
ಬಳಿಕ ಮಸೀದಿ ಪ್ರಧಾನ ಕಾಯದರ್ಶಿ ಹಾಜಿ ನಿಸಾರ್ ಅಹ್ಮದ್ ರವರು ಮಾತನಾಡಿ (bಥಿಣes3) ಕಾಸರಗೋಡು ಜಿಲ್ಲೆಯಲ್ಲೇ ಅತೀ ಹೆಚ್ಚಿನ ಮಂದಿ ಪಾಲ್ಗೊಳ್ಳುವ ಸುಮಾರು 3500 ಕ್ಕೂ ಸದಸ್ಯರನ್ನೊಳಗೊಂಡ ಮಿಲಾದ್ ರಾಲಿ ನಮ್ಮ ಮಸೀದಿಯ ಅಧೀನದಲ್ಲಿ ನಡೆಯುತ್ತಿದೆ. ಮಳೆಯನ್ನು ಕೂಡಾ ಲೆಕ್ಕಿಸದೆ ಪ್ರವಾದಿ ಕೀರ್ತನೆಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಎಲ್ಲರೂ ಸಹಕರಿಸಿದ್ದಾರೆ. ಇನ್ನು ಮುಂದಕ್ಕೂ ಇದೇ ರೀತಿ ಸಹಕಾರವನ್ನು ನಿರೀಕ್ಷಿಸುತ್ತಿರುವುದಾಗಿ ಅವರು ಹೇಳಿದರು.
ಈ ಸಂದರ್ಭ ಇನ್ನೊಬ್ಬ ಮುಖ್ಯ ಅತಿಥಿಯಾಗಿ ಡಾಕ್ಟರ್ ಹಸನ್ ಶಿಹಾಬ್ ಹುದವಿ ಉಪಸ್ಥಿತರಿದ್ದರು. ಜಮಾಅತ್ ಅಧ್ಯಕ್ಷ ಅಬ್ದುಲ್ ರಶೀದ್ ಉಸ್ಮಾನ್, ಹಾಜಿ ನಿಸಾರ್ ಆಹ್ಮದ್ ಬಿ ಎಸ್, ಮೊಹಮ್ಮದ್ ಅಜೀಮ್ ಮಣಿಮುಂಡ, ಫಝಲ್ ರಹ್ಮಾನ್, ಇಕ್ಬಾಲ್ ಉಸ್ಮಾನ್ ಇμರ್Áದ್ ಬಾಬಾ ಮೊದಲಾದವರು ನೇತೃತ್ವ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮಗಳಿಗೆ ಪ್ರವಾದಿ ಜೀವನದ ಸಂದೇಶವನ್ನು ನೀಡಲಾಯಿತು. ರಾಲಿಗಳಲ್ಲಿ ಮಕ್ಕಳಿಗೆ ಹಸಿರು ಲಡ್ಡುಗಳ ಜೊತೆಯಾಗಿ ಸಿಹಿ ತಿಂಡಿ ಹಂಚಿ ಪಾನೀಯಗಳನ್ನು ವಿತರಿಸಲಾಯಿತು. ಮಿಲಾದ್ ರಾಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಿರಿಯರು ಕೂಡಾ ಭಾಗಿಯಾಗಿ ಮಿಲಾದುನ್ನಭಿಯ ಸಂಭ್ರ ಹಾಗೂ ಸಡಗರಕ್ಕೆ ಸಾಕ್ಷಿಯಾದರು.